ಧರ್ಮೇಂದ್ರ ಪ್ರಧಾನ್ ಒಬ್ಬ 'ದುರಹಂಕಾರಿ' ಎಂದು ಜರಿದ ಸಿಎಂ ಸ್ಟಾಲಿನ್!
- Ananthamurthy m Hegde
- Mar 10
- 1 min read
ತಮಿಳುನಾಡಿನಲ್ಲಿ ತ್ರಿಭಾಷಾ ನೀತಿ ಕುರಿತು ಸಿಎಂ ಎಂ.ಕೆ ಸ್ಟಾಲಿನ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಡುವಿನ ವಿವಾದ ಮುಂದುವರೆದಿದೆ. ಎಂ.ಕೆ. ಸ್ಟಾಲಿನ್ ಧರ್ಮೇಂದ್ರ ಪ್ರಧಾನ್ ಅವರನ್ನು ದುರಹಂಕಾರಿ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ ಸರ್ವಾಧಿಕಾರಿಯಂತೆ ದುರಹಂಕಾರದಿಂದ ಮಾತನಾಡುತ್ತಿದ್ದೀರಾ. ನಿಮ್ಮ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಸ್ಟಾಲಿನ್ ಎಚ್ಚರಿಸಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಡಿಎಂಕೆಯನ್ನು ಅಪ್ರಾಮಾಣಿಕ ಎಂದು ಕರೆದಿದ್ದು. ಅದು ತಮಿಳುನಾಡು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಕೇಂದ್ರ ಶಿಕ್ಷಣ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಾಲಿನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಶಿಕ್ಷಣ ಸಚಿವರು ಶಿಸ್ತುಬದ್ಧರಾಗಿರಬೇಕು ಎಂದು ಬರೆದಿದ್ದಾರೆ. ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರಾಕರಿಸಿದೆ. ಅದನ್ನು ಜಾರಿಗೆ ತರಲು ಯಾರೂ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.
ತಾನು ಸರ್ವಾಧಿಕಾರಿಯಂತೆ ಭಾವಿಸಿ ದುರಹಂಕಾರದಿಂದ ಮಾತನಾಡುವ ಕೇಂದ್ರ ಶಿಕ್ಷಣ ಸಚಿವರನ್ನು ಶಿಸ್ತುಬದ್ಧಗೊಳಿಸಬೇಕು! ನೀವು ತಮಿಳುನಾಡಿನ ಸಂಸದರೊಂದಿಗೆ ಅಗೌರವದಿಂದ ವರ್ತಿಸುತ್ತಿದ್ದೀರಾ.. ತಮಿಳುನಾಡಿನ ಹಣವನ್ನು ತಡೆಹಿಡಿಯುತ್ತಿದ್ದೀರಾ? ನೀವು ತಮಿಳುನಾಡಿನ ಜನರನ್ನು ಅವಮಾನಿಸುತ್ತಿದ್ದೀರಿ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಇದನ್ನು ಒಪ್ಪುತ್ತಾರೆಯೇ? ಎಂದು ಅವರು ಬರೆದಿದ್ದಾರೆ.
ಪ್ರಧಾನ್ ಅವರೇ, ನಾವು ಜನರ ಅಭಿಪ್ರಾಯಗಳನ್ನು ಗೌರವಿಸಿ ಮಾತ್ರ ಕೆಲಸ ಮಾಡುತ್ತೇವೆ! ನಿಮ್ಮಂತೆ ನಾಗ್ಪುರದ ಮಾತುಗಳಿಗೆ ಬದ್ಧರಲ್ಲ! ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ನಾವು ಸಿದ್ಧರಿಲ್ಲ, ಮತ್ತು ಅದನ್ನು ಕಾರ್ಯಗತಗೊಳಿಸಲು ಯಾರೂ ನನ್ನನ್ನು ಒತ್ತಾಯಿಸಲು ಸಾಧ್ಯವಿಲ್ಲ. ತಮಿಳುನಾಡು ವಿದ್ಯಾರ್ಥಿಗಳಿಗೆ ಹಣವನ್ನು ಬಿಡುಗಡೆ ಮಾಡಲು ಮತ್ತು ನಮ್ಮಿಂದ ಸಂಗ್ರಹಿಸಿದ ತೆರಿಗೆಯನ್ನು ಬಿಡುಗಡೆ ಮಾಡಲು ಸಾಧ್ಯವೇ ಎಂದು ಉತ್ತರಿಸಿ? ಎಂದು ಅವರು ಹೇಳಿದರು
Comments