ಫೆಂಗಲ್ ಅಬ್ಬರಕ್ಕೆ ರೈತರು ತತ್ತರ : ಕಟಾವು ಮಾಡಿದ ಭತ್ತಕ್ಕೆ ವರುಣನ ಕಾಟ
- Ananthamurthy m Hegde
- Dec 8, 2024
- 1 min read
ಸಿದ್ದಾಪುರ : ಫೆಂಗಲ್ ಚಂಡಮಾರುತದಿಂದಾಗಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿದ ಪರಿಣಾಮ ಕಟಾವು ಮಾಡಿದ ಭತ್ತದ ಗದ್ದೆಗಳು ಜಲಾವೃತಗೊಂಡು ಭತ್ತವು ಮೊಳಕೆಯೊಡೆಯಲಾರಂಭಿಸಿ ರೈತರಿಗೆ ನಷ್ಟ ಉಂಟಾಗಿದೆ. ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ರೈತರಿಗೆ ಉಂಟಾದ ನಷ್ಟಕ್ಜೆ ಪರಿಹಾರ ಒದಗಿಸಿಕೊಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.
ತಾಲೂಕಿನ ಕವಂಚೂರ್, ಅರೆಂದೂರು,ನೆಜ್ಜುರ್, ಅಕ್ಕುಂಜಿ, ಗೋಳಗೊಡ ಮುಂತಾದ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಕಟಾವು ಮಾಡಿದ ಗದ್ದೆಗೆ ನೀರು ತುಂಬಿ ಗದ್ದೆಗಳು ಸಂಪೂರ್ಣ ಜಲಾವ್ರತಗೊಂಡು ಭತ್ತದ ತೆನೆ ನೀರಿನಲ್ಲಿ ನೆನೆದು ಮೊಳಕೆ ಒಡೆಯಲು ಆರಂಭಿಸಿವೆ, ಗದ್ದೆಯಿಂದ ಎತ್ತಿ ಒಣಗಿಸಲು ಇಟ್ಟರೂ ಸಹ ಬಿಸಿಲು ಇಲ್ಲದ ಕಾರಣ ಹುಲ್ಲು ಸಹ ಕೊಳೆಯಲು ಆರಂಭಿಸಿವೆ ಇದರಿಂದ ಭತ್ತದ ಜೊತೆಗೆ ಹುಲ್ಲು ಕೂಡ ನಾಶವಾಗುತ್ತಿದೆ ವರ್ಷದ ಆದಾಯವು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ ಕೂಡಲೇ ಸರಕಾರ ಪರಿಹಾರ ಒದಗಿಸಿ ಕೊಡಬೇಕು ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ನಾಸಿರ್ ವಲ್ಲಿ ಖಾನ್ ಹಾಗೂ ರೈತರು ನೆಜ್ಜುರ್ ಭಾಗದ ರೈತರು ಒತ್ತಾಯ ಮಾಡಿದ್ದಾರೆ.
Comments