top of page

ಬಿಜೆಪಿಗೆ ನೂತನ ಸಾರಥಿ: ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂವರು ಮಹಿಳೆಯರ ಹೆಸರು ಮುಂಚೂಣಿಗೆ!

  • Writer: Ananthamurthy m Hegde
    Ananthamurthy m Hegde
  • Jul 7
  • 1 min read
ree

ನವದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಕುರಿತು ಹೆಚ್ಚುತ್ತಿರುವ ಊಹಾಪೋಹಗಳ ನಡುವೆ ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಗ್ ಚೌಹಾಣ್, ಪ್ರಲ್ಹಾದ್ ಜೋಶಿ ಮತ್ತು ಇತರ ಪ್ರಮುಖರ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂವರು ಮಹಿಳೆಯರ ಹೆಸರುಗಳು ಇದ್ದಕ್ಕಿದ್ದಂತೆ ಮುಂಚೂಣಿಗೆ ಬಂದಿವೆ.

ಬಿಜೆಪಿಯ ಹಲವು ಹಿರಿಯ ನಾಯಕರು ಈ ಮೂವರು ಮಹಿಳೆಯರಲ್ಲಿ ಒಬ್ಬರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆಯನ್ನು ದೃಢವಾಗಿ ಬೆಂಬಲಿಸದಿದ್ದರೂ ಸದ್ಯ ಆಂಧ್ರಪ್ರದೇಶದ ಮಾಜಿ ಬಿಜೆಪಿ ಮುಖ್ಯಸ್ಥೆ ದಗ್ಗುಬಾಟಿ ಪುರಂದೇಶ್ವರಿ, ವನತಿ ಶ್ರೀನಿವಾಸನ್ (ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ) ಮತ್ತು ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರುಗಳು ಜೋರಾಗಿ ಕೇಳಿಬರುತ್ತಿವೆ.

ಪುರಂದೇಶ್ವರಿ ಅವರು ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡ ನಂತರ ಪಕ್ಷದಲ್ಲಿ ಇನ್ನೂ 15 ವರ್ಷಗಳನ್ನು ಪೂರ್ಣಗೊಳಿಸದ ಕಾರಣ ಅವರು ಅರ್ಹತೆ ಹೊಂದಿಲ್ಲ ಎಂದು ಮೂಲಗಳು ಹೇಳಿವೆ. ಬಿಜೆಪಿಯ ಸಂವಿಧಾನದ ಪ್ರಕಾರ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯು ಕನಿಷ್ಠ 15 ವರ್ಷಗಳ ಕಾಲ ಪ್ರಾಥಮಿಕ ಸದಸ್ಯನಾಗಿರಬೇಕು. ಆದಾಗ್ಯೂ, ಆಕೆಯ ವಿಷಯದಲ್ಲಿ ಪಕ್ಷವು ಒಂದು ವಿನಾಯಿತಿಯನ್ನು ಮಾಡಬಹುದು ಎನ್ನಲಾಗಿದೆ.

ವನತಿ ಶ್ರೀನಿವಾಸನ್, ದೇಶದಾದ್ಯಂತ ಮಹಿಳಾ ಮೋರ್ಚಾ ನಡೆಸುತ್ತಿರುವ ಹಲವಾರು ಕಾರ್ಯಕ್ರಮಗಳಿಗಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ ಮತ್ತೋರ್ವ ಅಭ್ಯರ್ಥಿಯಾಗಿದ್ದಾರೆ. ಆದರೆ ಅವರಿಗೆ ಹಿಂದಿ ಭಾಷೆಯಲ್ಲಿ ನಿರರ್ಗಳ ಕೊರತೆಯಿದೆ, ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಅತ್ಯಗತ್ಯವಾಗಿದೆ. ಅವರನ್ನು ಆಯ್ಕೆ ಮಾಡಿದರೆ ಅದು ದೊಡ್ಡ ಆಶ್ಚರ್ಯಕ್ಕೆ ಕಾರಣವಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ಮಧ್ಯೆ ಆರೆಸ್ಸೆಸ್ ನಿರ್ಧಾರಕ್ಕೆ ಬದ್ಧರಾಗಿ ಉನ್ನತ ಹುದ್ದೆಗೆ ಮಹಿಳಾ ನಾಯಕಿಯನ್ನು ಪಕ್ಷ ಬಯಸುತ್ತದೆ ಎಂದು ಊಹಿಸಲಾಗಿರುವುದರಿಂದ ಡಾ.ಸುಧಾ ಯಾದವ್ ಅವರ ಹೆಸರು ಬಹಳ ಹಿಂದಿನಿಂದಲೂ ಪರಿಗಣನೆಯಲ್ಲಿದೆ.

ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಮತ್ತು ಅದರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಯಾದವ್ ಅವರು ಆರ್‌ಎಸ್‌ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವನ್ನು ಹೊಂದಿದ್ದಾರೆ. ಅವರು ಐಐಟಿ ರೂರ್ಕಿಯಿಂದ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅವರು ಉತ್ತಮವಾಗಿ ಮಾತನಾಡಲಿದ್ದು, ಅವರು ಆಯ್ಕೆಯಾದರೂ ಅಚ್ಚರಿಪಡಬೇಕಾಗಿಲ್ಲ.

ಅವರಿಂದ ಬಿಹಾರದಲ್ಲಿ ಆರ್‌ಜೆಡಿ ಮತ್ತು ಯುಪಿಯಲ್ಲಿ ಎಸ್‌ಪಿ ಪ್ರಾಬಲ್ಯ ಎಂದು ಪರಿಗಣಿಸಲಾದ ಯಾದವ ಮತ ಬ್ಯಾಂಕ್ ಬ್ಯಾಂಕ್ ಸೆಳೆಯಲು ನೆರವಾಗಲಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಜುಲೈ 10 ಮತ್ತು 18 ರ ನಡುವೆ ಬಿಜೆಪಿ ತನ್ನ ಸಾರಥಿಯನ್ನು ಘೋಷಿಸುವ ಸಾಧ್ಯತೆಯಿದೆ. ಪ್ರಸ್ತುತ ಮುಂಚೂಣಿಯಲ್ಲಿರುವ ಹೆಸರುಗಳಲ್ಲಿ ನಿರ್ಮಲಾ ಸೀತಾರಾಮನ್, ದಗ್ಗುಬಾಟಿ ಪುರಂದೇಶ್ವರಿ, ವನತಿ ಶ್ರೀನಿವಾಸನ್, ಡಾ ಸುಧಾ ಯಾದವ್, ಅಪರಾಜಿತಾ ಸಾರಂಗಿ, ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಗ್ ಚೌಹಾಣ್, ಪ್ರಲ್ಹಾದ್ ಜೋಶಿ, ಅರ್ಜುನ್ ರಾಮ್ ಮೇಘವಾಲ್, ಜಿ. ವಿನೋದ್ ತಾವ್ಡೆ, ಮತ್ತು ಕೆ. ಅಣ್ಣಾಮಲೈ ಇದ್ದಾರೆ. ತಮಿಳುನಾಡು ಮಾಜಿ ರಾಜ್ಯಪಾಲರಾದ ಡಾ ತಮಿಳಿಸೈ ಸೌಂದರರಾಜನ್ ಹೆಸರು ಕೂಡಾ ಕೇಳಿಬರುತ್ತಿದೆ.

Comments


Top Stories

bottom of page