ಮತ್ತೆ ಹೊತ್ತಿ ಉರಿದ ಮಣಿಪುರ : ಓರ್ವ ಸಾವು
- Ananthamurthy m Hegde
- Mar 9
- 1 min read
ಇಂಫಾಲ: ಜನಾಂಗೀಯ ಸಂಘರ್ಷದ ಬೆಂಕಿಯಲ್ಲಿ ಬೆಂದಿರುವ ಮಣಿಪುರದಲ್ಲಿ 22 ತಿಂಗಳ ಬಳಿಕ ಆರಂಭವಾದ ಮುಕ್ತ ಸಂಚಾರ ವ್ಯವಸ್ಥೆಗೆ ಮೊದಲ ದಿನವೇ ವಿಘ್ನ ಎದುರಾಯಿತು. ಕುಕಿ ಪ್ರಾಬಲ್ಯ ಪ್ರದೇಶದಲ್ಲಿ ಸಾರಿಗೆ ಬಸ್‌ಗಳನ್ನು ತಡೆಯಲಾಗಿದೆ. ಕೆಲವು ಬಸ್‌ಗಳಿಗೆ ಬೆಂಕಿ ಹಚ್ಚಿರುವ ಪ್ರಕರಣಗಳು ವರದಿಯಾಗಿವೆ. ಘರ್ಷಣೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಭದ್ರತಾ ಪಡೆಯ 27 ಯೋಧರು ಗಾಯಗೊಂಡಿದ್ದಾರೆ.

ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ರಾಜ್ಯದಲ್ಲಿಇತ್ತೀಚೆಗೆ ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿಪರಿಸ್ಥಿತಿ ಸುಧಾರಿಸುವ ಉದ್ದೇಶದೊಂದಿಗೆ ಸಂಘರ್ಷ ಪೀಡಿತ ಪ್ರದೇಶದಲ್ಲಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಪೊಲೀಸ್ ಬಿಗಿ ಭದ್ರತೆಯೊಂದಿಗೆ ಇಂಫಾಲದಿಂದ ಸೇನಾಪತಿ ನಡುವೆ ಬಸ್ ಸಂಚಾರ ಆರಂಭಿಸಲಾಯಿತು.















Comments