top of page

ಯೂಟ್ಯೂಬರ್ ಮೇಲೆ ಎಫ್ಐಆರ್

  • Writer: Ananthamurthy m Hegde
    Ananthamurthy m Hegde
  • Aug 8
  • 1 min read
ree

ಸಿದ್ದಾಪುರ : ಜೋಗ ಜಲಪಾತದ ಅಪಾಯಕರ ಸ್ಥಳದಲ್ಲಿ ಕಲ್ಲು ಬಂಡೆಗಳ ಮೇಲೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಮೇಲೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ಮೂಲದ ಜಾಲಹಳ್ಳಿ ಬಾಹುಬಲಿ ನಗರದ ಗೌತಮ ಹಾಗೂ ಸೊರಬ ಮೂಲದ ಸಿದ್ದರಾಜು ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿದ್ದಾಪುರ ವ್ಯಾಪ್ತಿಗೆ ಬರುವ ಜೋಗ ಜಲಪಾತದ ನೀರು ಧುಮ್ಮಿಕ್ಕಿ ಹರಿಯುವ ರಾಜ ಫಾಲ್ಸ್ ನಲ್ಲಿ ಅಪಾಯಕರ ಕಲ್ಲಿನ ಬಂಡೆಯ ಮೇಲೆ ನಿಂತು ವಿಡಿಯೋ ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದನು ಎನ್ನಲಾಗಿದೆ.

ಇದು ಅಪಾಯಕರ ಸ್ಥಳ ಪ್ರವಾಸಿಗರು ಈ ಸ್ಥಳಕ್ಕೆ ಬರಬಾರದು ಎನ್ನುವ ನಾಮ ಫಲಕ ಇದ್ದರು ಆ ಸ್ಥಳಕ್ಕೆ ಹೋಗಿ ಸುರಕ್ಷತಾ ನಿಯಮ ಉಲ್ಲಂಘನೆ

ಮಾಡಿರುವುದರಿಂದ ಪ್ರಕರಣ ದಾಖಲಾಗಿದೆ.

Comments


Top Stories

bottom of page