top of page

ಸಿದ್ದಾಪುರದ ಹಸೆ ಚಿತ್ತಾರ ಕಲಾವಿದೆಗೆ ನವದೆಹಲಿಗೆ ಆಹ್ವಾನ

  • Writer: Ananthamurthy m Hegde
    Ananthamurthy m Hegde
  • Aug 8
  • 1 min read
ree

ಸಿದ್ದಾಪುರ: ತಾಲ್ಲೂಕಿನ ಮನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸುವಂತೆಯ ಸರಸ್ವತಿ ಈಶ್ವರ ನಾಯ್ಕ ಅವರಿಗೆ ನವದೆಹಲಿಯಲ್ಲಿ 78ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಭವನದಿಂದ ಮಂಗಳವಾರ ಆಮಂತ್ರಣ ಬಂದಿದೆ.


ಸಂಜೀವಿನಿ ಯೋಜನೆಯಡಿ ನಡೆಯುವ ಸರಸ್ ಮೇಳಗಳಲ್ಲಿ ಪಾಲ್ಗೊಂಡು ಚಿತ್ತಾರ ಕಲೆಯನ್ನು ಇಡೀ ರಾಷ್ಟ್ರಕ್ಕೆ ಪರಿಚಯಿಸಿದ್ದಕ್ಕೆ ಸರಸ್ವತಿ ಅವರಿಗೆ ಈ ಅವಕಾಶ ಸಿಕ್ಕಿದೆ. ಅಲ್ಲದೆ, ಅವರು ಮನಮನೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಸರಸ್ವತಿ ನಾಯ್ಕ ಅವರ ಪತಿ, ಹಸೆ ಚಿತ್ತಾರ ಕಲಾವಿದ ಈಶ್ವರ ನಾಯ್ಕ ಹಸುವಂತೆ ಅವರಿಗೆ 2025ರ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತ್ತು.

Comments


Top Stories

bottom of page