ರೈಲಿನ ಇಂಜಿನ್ ಅಡಿಯಲ್ಲಿ ಕುಳಿತು 290 ಕಿ.ಮೀ ಪ್ರಯಾಣಿಸಿದ ವ್ಯಕ್ತಿ
- Ananthamurthy m Hegde
- Dec 27, 2024
- 1 min read

ದಾನಪುರ ಎಕ್ಸ್‌ಪ್ರೆಸ್‌ನ ಕೋಚ್‌ನಡಿಯಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಜಬಲ್‌ಪುರದದಲ್ಲಿ ನಡೆದಿದೆ. ಈತ ಇಟಾರ್ಸಿಯಿಂದ ಜಬಲ್‌ಪುರದವರೆಗೆ (290 ಕಿಮೀ) ರೈಲಿನ ಬೋಗಿಯ ಕೆಳಗೆ, ಚಕ್ರಗಳ ನಡುವೆ ಅಡಗಿ ಕುಳಿತುಕೊಂಡು ಪ್ರಯಾಣಿಸಿರುವುದು ತನಿಖೆಯ ವೇಳೆ ತಿಳಿದುಬಂದಿದೆ.
ಜಬಲ್ಪುರ ರೈಲು ನಿಲ್ದಾಣದ ಬಳಿ ರೋಲಿಂಗ್ ಪರೀಕ್ಷೆಯ ಸಮಯದಲ್ಲಿ ರೈಲಿನ ಸಿಬ್ಬಂದಿ ಕೋಚ್ ಅಡಿಯಲ್ಲಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಅಡಗಿರುವುದು ತಿಳಿಬಂದಿದೆ. ಆಘಾತಕ್ಕೊಳಗಾದ ನೌಕರರು ಕೂಡಲೇ ಸ್ಥಳಕ್ಕೆ ಆರ್‌ಪಿಎಫ್‌ಗೆ ಕರೆ ಮಾಡಿದ್ದಾರೆ. ರೈಲಿನಡಿಯಿಂದ ವ್ಯಕ್ತಿ ಹೊರಬರುತ್ತಿರುವ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ, ಎಲ್ಲಿಂದ ಬಂದವನು ಅಥವಾ ರೈಲಿನ ಟ್ರಾಲಿಯನ್ನು ಹೇಗೆ ಪ್ರವೇಶಿಸಿದನು ಎಂಬುದು ಸ್ಪಷ್ಟವಾಗಿಲ್ಲ. ರೈಲ್ವೇ ರಕ್ಷಣಾ ಪಡೆ ವ್ಯಕ್ತಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ. ವಿಚಾರಣೆ ಮುಂದುವರೆದಂತೆ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ.
ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಡಿಸೆಂಬರ್ 26ರಂದು ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ ಒಂದೇ ದಿನದಲ್ಲಿ ಸಾವಿರಾರು ಜನರು ವೀಕ್ಷಿಸಿದ್ದಾರೆ.















Comments