top of page

ವಖ್ಫ್ ಹೆಸರಿನಲ್ಲಿ ಹೋಗಿರುವ ಎಲ್ಲ ಭೂಮಿಯನ್ನು ವಾಪಾಸ್ ಪಡೆಯುತ್ತೇವೆ : ಯೋಗಿ

  • Writer: Ananthamurthy m Hegde
    Ananthamurthy m Hegde
  • Jan 9
  • 1 min read

ಲಖನೌ: ವಕ್ಫ್ ಹೆಸರಿನಲ್ಲಿ ಹೋಗಿರುವ ಪ್ರತಿ ಇಂಚು ಭೂಮಿಯನ್ನೂ ವಾಪಸ್ ಪಡೆಯುತ್ತೇವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಶಪಥ ಮಾಡಿದ್ದಾರೆ.

ree

ಖಾಸಗಿ ಸುದ್ದಿ ವಾಹಿನಿಯೊಂದು ಲಖನೌ ನಲ್ಲಿ ಆಯೋಜಿಸಿದ್ದ ಮಹಾಕುಂಭ ಮಹಾಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಸನಾತನ ಧರ್ಮದ ಆಸ್ತಿಕ ಪರಂಪರೆ ಜಗತ್ತಿನ ಪುರಾತನ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ, ಇದು ಯಾವುದೇ ಮತ ಅಥವಾ ಪಂಗಡಗಳಿಗೆ ಹೋಲಿಕೆಗೆ ನಿಲುಕದ್ದು ಎಂದು ಹೇಳಿದ್ದಾರೆ.

"ನಾನು ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿದ್ದೇನೆ, ಅದರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಘಟನೆಗಳು ಅಷ್ಟೇ ಪುರಾತನವಾಗಿವೆ. ಸನಾತನದ ಸಂಪ್ರದಾಯವು ಆಕಾಶಕ್ಕಿಂತ ಎತ್ತರವಾಗಿದೆ ಮತ್ತು ಹೋಲಿಕೆಯನ್ನು ಮೀರಿದೆ" ಎಂದು ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಬಗ್ಗೆ ಕಠಿಣ ನಿಲುವು ತಳೆದ ಅವರು, ಇದು ವಕ್ಫ್ ಮಂಡಳಿಯೋ ಅಥವಾ ಭೂ ಮಾಫಿಯಾಗಳ ಮಂಡಳಿಯೋ ಎಂದು ಹೇಳುವುದು ಕಷ್ಟ.

ತಮ್ಮ ಸರ್ಕಾರ ವಕ್ಫ್ ಕಾಯಿದೆಗೆ ತಿದ್ದುಪಡಿ ತಂದಿದೆ ಮತ್ತು ಎಲ್ಲಾ "ಆಕ್ರಮಿತ" ಭೂಮಿಯನ್ನು ಸಕ್ರಿಯವಾಗಿ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

ವಕ್ಫ್‌ನ ನೆಪದಲ್ಲಿ ವಶಪಡಿಸಿಕೊಂಡಿರುವ ಪ್ರತಿಯೊಂದು ಇಂಚು ಭೂಮಿಯನ್ನು ನಾವು ವಾಪಸ್ ಪಡೆಯುತ್ತೇವೆ ಮತ್ತು ಬಡವರಿಗೆ ವಸತಿ, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲು ಬಳಸುತ್ತೇವೆ ಎಂದು ತಿಳಿಸಿದ್ದಾರೆ.

Comments


Top Stories

bottom of page