ಸೋಫಿಯಾ ಖುರೇಷಿ ನಂತರ ಮುಸ್ಲಿಂ ನಾಯಕರತ್ತ ಗಮನ ಹರಿಸಿದ ಮೋದಿ ಸರ್ಕಾರ!

ಪಹಲ್ಗಾಮ್‌ನಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡದ ನಂತರ, ಭಾರತವು ಪಾಕಿಸ್ತಾನ ಮತ್ತು ಅಲ್ಲಿ ಪೋಷಿಸಲ್ಪಟ್ಟ ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಮೂಲಕ ತಕ್ಕ ಉತ್ತರ ಕೊಟ್ಟಿದೆ.
ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಮೊದಲು 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದವು. ಅತ್ತ ಪಾಕಿಸ್ತಾನವು ಭಾರತೀಯ ಮಿಲಿಟರಿ ಮತ್ತು ವಾಯುನೆಲೆಗಳನ್ನು ಗುರಿಯಾಗಿಸಲು ಧೈರ್ಯ ಮಾಡಿದಾಗ, ಭಾರತೀಯ ಸೈನಿಕರು ಅವರ 11 ವಾಯುನೆಲೆಗಳನ್ನು ನಾಶಪಡಿಸಿದರು. ಈಗ ಕೇಂದ್ರ ಸರ್ಕಾರ ಪಾಕಿಸ್ತಾನದ ಭಯೋತ್ಪಾದನೆಯ ಮುಖವನ್ನು ಬಯಲು ಮಾಡಲು ಅಗಾಧ ಯೋಜನೆ ರೂಪಿಸಿದ್ದು,
ಪಾಕಿಸ್ತಾನದ ಭಯೋತ್ಪಾದನೆಯ ಮುಖವಾಡವನ್ನು ಕಳಚಲು ಇಡೀ ಪ್ರಪಂಚವನ್ನು 7 ವಲಯಗಳಾಗಿ ವಿಂಗಡಿಸಿದ. ಆ ಏಳು ವಲಯಗಳ ದೇಶಗಳಿಗಾಗಿ 7 ತಂಡಗಳನ್ನು ರಚಿಸಿ ಆಪರೇಷನ್ ಸಿಂಧೂರ್ ಮತ್ತು ಪಾಕಿಸ್ತಾನದ ದುಷ್ಖೃತ್ಯದ ಬಗ್ಗೆ ವಿವರಿಸಲು ಕಳುಹಿಸಲಾಗಿದೆ. ಏಳು ತಂಡಗಳಲ್ಲಿ ಒಟ್ಟು 51 ನಾಯಕರಿಗೆ ಸ್ಥಾನ ನೀಡಲಾಗಿದೆ.










Comments