ಹುಟ್ಟಿದಾಗಲೇ ಮೀನುಗಾರರ ಮಗುವಿನೊಂದಿಗೆ ಅದಲು ಬದಲಾಗಿದ್ದ ಈ ಕ್ರಿಕೆಟರ್, ಇಂದು 200 ಕೋಟಿಗಿಂತ ಹೆಚ್ಚಿನ ಸಂಪತ್ತಿಗೆ ಒಡೆಯ
- Ananthamurthy m Hegde
- Jun 27
- 1 min read

ಭಾರತದ ಮಾಜಿ ಕ್ರಿಕೆಟ್ ನಾಯಕ ಸುನಿಲ್ ಗವಾಸ್ಕರ್ ಅವರಿಗೆ ಲಿಟಲ್ ಮಾಸ್ಟರ್ ಎಂಬ ಇನ್ನೊಂದು ಹೆಸರೂ ಇದೆ . ಭಯವಿಲ್ಲದ ನಿರ್ಭೀತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಗುರುತಿಸಲಾಗುತ್ತದೆ. ತಮ್ಮ ಉಜ್ವಲ ವೃತ್ತಿಜೀವನದುದ್ದಕ್ಕೂ ಅವರು ದೇಶ ಹಾಗೂ ವಿದೇಶಗಳಲ್ಲಿ ಹಲವಾರು ಪುರಸ್ಕಾರ, ಖ್ಯಾತಿಗಳನ್ನು ತಂದುಕೊಟ್ಟಿದೆ. 1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು.
ಗವಾಸ್ಕರ್ ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ 10,000 ಕ್ಕೂ ಹೆಚ್ಚು ರನ್‌ಗಳು ಮತ್ತು ಹಲವಾರು ಶತಕಗಳನ್ನು ಗಳಿಸಿದ್ದರೂ, ಅವರು ಒಂದು ಐಕಾನಿಕ್ ಬ್ರ್ಯಾಂಡ್ ಆಗಿ ಮಾರ್ಪಟ್ಟಿದ್ದಾರೆ. ಇನ್ನು ನಿವೃತ್ತಿಯ ನಂತರವೂ ಸುನಿಲ್ ಗವಾಸ್ಕರ್ ಚಟುವಟಿಕೆಯ ಕೇಂದ್ರಬಿಂದುವಾಗಿ ಗಮನ ಸೆಳೆದಿದ್ದಾರೆ. ನಿರೂಪಕರಾಗಿ ಮತ್ತು ನಂತರ ಐಸಿಸಿ ಕ್ರಿಕೆಟ್ ಸಮಿತಿಯ ಭಾಗವಾಗಿ ಹೊಸ ಹುದ್ದೆಯನ್ನಲಂಕರಿಸಿದ ಅನುಭವ ಹೊಂದಿದ್ದಾರೆ.
ವ್ಯವಹಾರ ಕ್ಷೇತ್ರಕ್ಕೂ ಕಾಲಿಟ್ಟ ಈ ಕಲಿ 1985 ರಲ್ಲಿ ಭಾರತದ ಮೊದಲ ಕ್ರೀಡಾ ನಿರ್ವಹಣಾ ಕಂಪನಿಯಾದ ಪ್ರೊಫೆಷನಲ್ ಮ್ಯಾನೇಜ್‌ಮೆಂಟ್ ಗ್ರೂಪ್ (ಪಿಎಂಜಿ) ಅನ್ನು ಸ್ಥಾಪಿಸಿದರು. ಇದು ಮುಖ್ಯವಾಗಿ ಆಟಗಾರರ ನಿರ್ವಹಣೆ, ಪ್ರಾಯೋಜಕತ್ವದ ಒಪ್ಪಂದಗಳು ಮತ್ತು ಈವೆಂಟ್ ಸಂಘಟನೆಯನ್ನು ನೋಡಿಕೊಳ್ಳುತ್ತದೆ. ಗವಾಸ್ಕರ್ ಸಂಪತ್ತಿನ ನಿವ್ವಳ ಮೊತ್ತಕ್ಕೆ ಈ ಸಂಸ್ಥೆ ಕೂಡ ಕೊಡುಗೆ ನೀಡಿದ್ದು ರೂ 200 ಕೋಟಿ ಆದಾಯದ ಮೂಲಕ ಕ್ರಿಕೆಟ್ ಪಟು ಗಮನ ಸೆಳೆಯುತ್ತಾರೆ.
Comments