೭೦ ವರ್ಷಗಳ ಹಿಂದಿನ ಹೀನಾಯ ದಾಖಲೆ ಮುರಿದ ಭಾರತ-ಆಸ್ಟ್ರೇಲಿಯಾ
- Ananthamurthy m Hegde
- Jan 4
- 1 min read
ಸಿಡ್ನಿ: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಉಭಯ ತಂಡಗಳ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ 70 ವರ್ಷಗಳ ಹಿಂದಿನ ಹೀನಾಯ ದಾಖಲೆಗೆ ಪಾತ್ರವಾಗಿದೆ.

ಹೌದು.. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಉಭಯ ತಂಡಗಳೂ ಮೊದಲ ಇನ್ನಿಂಗ್ಸ್ ನಲ್ಲಿ 200ಕ್ಕಿಂತ ಕಡಿಮೆ ರನ್ ಗಳಿಗೆ ಆಲೌಟ್ ಆಗಿದ್ದು ಆ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಕಳಪೆ ದಾಖಲೆಗೆ ಪಾತ್ರವಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 185 ರನ್ ಗಳಿಗೇ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ಕೂಡ 181 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 4 ರನ್ ಗಳ ಹಿನ್ನಡೆ ಅನುಭವಿಸಿತು. ಆ ಮೂಲಕ ಈ ಪಂದ್ಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಉಭಯ ತಂಡಗಳು ಇನ್ನಿಂಗ್ಸ್ ವೊಂದರಲ್ಲಿ 200ಕ್ಕಿಂತ ಕಡಿಮೆ ರನ್ ಗೆ ಆಲೌಟ್ ಆದ 2ನೇ ನಿದರ್ಶನ ಇದಾಗಿದೆ.
ಈ ಹಿಂದೆ 1979/80ರಲ್ಲಿ ನಡೆದಿದ್ದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಉಭಯ ತಂಡಗಳೂ ಮೊದಲ ಇನ್ನಿಂಗ್ಸ್ ನಲ್ಲಿ 200ಕ್ಕಿಂತ ಕಡಿಮೆ ರನ್ ಗಳಿಗೆ ಆಲೌಟ್ ಆಗಿತ್ತು. ಅಂದು ಇಂಗ್ಲೆಂಡ್ 123ರನ್ ಗಳಿಗೇ ಆಲೌಟ್ ಆಗಿದ್ದರೆ, ಆಸ್ಟ್ರೇಲಿಯಾ ಕೇವಲ 145 ರನ್ ಗಳಿಗೆ ಸರ್ವಪತನ ಕಂಡಿತ್ತು. ಇದೀಗ ಭಾರತ ಮತ್ತು ಆಸ್ಚ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಈ ಪಟ್ಟಿಗೆ ಸೇರ್ಪಡೆಯಾಗಿದೆ.
Comments