top of page

ಹದಗೆಡುತ್ತಿರೋ ಭಾರತ-ಬಾಂಗ್ಲಾ ಸಂಬಂಧ, ಇದೇ ಅವಕಾಶ ಬಳಸಿಕೊಳ್ಳುತ್ತಿದೆ ಚೀನಾ!

  • Writer: Ananthamurthy m Hegde
    Ananthamurthy m Hegde
  • 12 hours ago
  • 2 min read

ಬಾಂಗ್ಲಾ ಮುಂದಿನ ದಿನಗಳಲ್ಲಿ ವಿಶ್ವಸಂಸ್ಥೆಯ ಕಡಿಮೆ ಅಭಿವೃದ್ಧಿ ಹೊಂದಿದ ದೇಶ (LDC) ವರ್ಗದಿಂದ ವರ್ಗೀಕರಣಗೊಳ್ಳಲಿದ್ದು, ಈ ಕ್ರಮವು ಯುರೋಪಿಯನ್ ಒಕ್ಕೂಟದಂತಹ (European Union) ರಫ್ತು ಮಾರುಕಟ್ಟೆಗಳಿಗೆ ಅದರ ಸುಂಕ-ಮುಕ್ತ ಪ್ರವೇಶವನ್ನು ಕೊನೆಗೊಳಿಸುತ್ತದೆ. ಅದಾಗ್ಯೂ, ಇದು ಹೊಸ ಸವಾಲುಗಳನ್ನು ಸೃಷ್ಟಿಮಾಡಲಿದೆ. ಅದರಲ್ಲೊಂದು ಬಾಂಗ್ಲಾ, ನವದೆಹಲಿಯನ್ನು ಬಿಟ್ಟು ಬೀಜಿಂಗ್ ಅನ್ನು ತನ್ನ ಆರ್ಥಿಕತೆಯ ತಾಣವನ್ನಾಗಿ ಬಳಸಿಕೊಳ್ಳಲಿದ್ದು, ಭಾರತ (India) ಹಾಗೂ ಬಾಂಗ್ಲಾದ ವ್ಯಾಪಾರ ಸಂಬಂಧಗಳು (Bangladesh's trade relations) ಹದಗೆಡಲು ಕಾರಣವಾಗುತ್ತಿವೆ.

ಭಾರತ ಮತ್ತು ದಕ್ಷಿಣ ಏಷ್ಯಾದ ಅತಿದೊಡ್ಡ ವ್ಯಾಪಾರ ಪಾಲುದಾರರ ನಡುವಿನ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳು ಹದಗೆಡುತ್ತಿದ್ದು, ಕೇಂದ್ರವು ಶನಿವಾರ ಬಾಂಗ್ಲಾದೇಶದ ಸರಕುಗಳ ಮೇಲೆ ಹಲವಾರು ಆಮದು ನಿರ್ಬಂಧಗಳನ್ನು ವಿಧಿಸಲು ನಿರ್ಧರಿಸಿದೆ. ಅದರಲ್ಲೊಂದು ದೇಶದ ಅತಿದೊಡ್ಡ ರಫ್ತು ವಸ್ತು ಮತ್ತು ವಿದೇಶಿ ವಿನಿಮಯದ ಪ್ರಮುಖ ಮೂಲವಾದ ಸಿದ್ಧ ಉಡುಪುಗಳ ಮೇಲೆ ಆಮದು ನಿರ್ಬಂಧ ಹೇರಲು ಸಿದ್ಧವಾಗಿದೆ.

ಬಾಂಗ್ಲಾದೇಶದ ರಫ್ತು ಸರಕುಗಳಿಗೆ ಐದು ವರ್ಷಗಳಷ್ಟು ಹಳೆಯದಾದ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯವನ್ನು ಏಪ್ರಿಲ್‌ನಲ್ಲಿ ನವದೆಹಲಿ ಕೊನೆಗೊಳಿಸಲು ನಿರ್ಧರಿಸಿರುವುದು ಎರಡು ದೇಶಗಳ ನಡುವಿನ ಸಂಬಂಧಗಳು ಹದಗೆಡುತ್ತಿರುವ ಆರಂಭಿಕ ಲಕ್ಷಣಗಳನ್ನು ಇದು ಪ್ರದರ್ಶಿಸಿದೆ. ಇನ್ನು ಈ ಹಿಂದೆ ಈ ಸೌಲಭ್ಯವನ್ನು ಬಳಸಿಕೊಂಡು ಢಾಕಾ ತನ್ನ ಸರಕುಗಳನ್ನು ಭಾರತೀಯ ಭೂ ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳನ್ನು ಬಳಸಿಕೊಂಡು ಹಲವಾರು ಪಾಶ್ಚಿಮಾತ್ಯ ದೇಶಗಳಿಗೆ ಸರಾಗವಾಗಿ ಸಾಗಿಸುತ್ತಿತ್ತು.

ಶನಿವಾರದ ಆಮದು ನಿರ್ಬಂಧಗಳು ಮತ್ತು ಸಾಗಣೆ ಸೌಲಭ್ಯವನ್ನು ಸ್ಥಗಿತಗೊಳಿಸುವುದು ಕ್ರಮವಾಗಿ ಢಾಕಾ ವಿಧಿಸಿರುವ ಇದೇ ರೀತಿಯ ನಿರ್ಬಂಧಗಳು ಮತ್ತು ಢಾಕಾದ ಸರಕುಗಳಿಂದ ಉಂಟಾದ ಬಂದರು ಟ್ರಾಫಿಕ್‌ನ ಪರಿಣಾಮವಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಜೊತೆಗೆ, ಬಾಂಗ್ಲಾದೇಶದ ಮುಖ್ಯ ಸಲಹೆಗಾರ - ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತರಾದ ಮುಹಮ್ಮದ್ ಯೂನಸ್, ಈಶಾನ್ಯ ಪ್ರದೇಶದಾದ್ಯಂತ ಚೀನಾದ ಆರ್ಥಿಕತೆಯ ಪ್ರಭಾವವನ್ನು ವಿಸ್ತರಿಸುವ ಸಲಹೆ ನೀಡಿರುವುದು ಭಾರತ-ಬಾಂಗ್ಲಾದೇಶ ವ್ಯಾಪಾರ ಸಂಬಂಧಗಳು ಹದಗೆಡಲು ಕಾರಣವಾಗಿವೆ.

ಚೀನಾದ ಕಾರ್ಯತಂತ್ರ

ಆದಾಗ್ಯೂ, ಭಾರತವು ಚೀನಾ ನೇತೃತ್ವದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP) ಒಪ್ಪಂದಕ್ಕೆ ಸೇರದಿರಲು ನಿರ್ಧರಿಸಿದೆ ಮತ್ತು ಅಮೆರಿಕ, ಬ್ರಿಟನ್, EU ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (EFTA) ಪ್ರದೇಶದೊಂದಿಗೆ ನಿಕಟ ಆರ್ಥಿಕ ಏಕೀಕರಣವನ್ನು ಅನುಸರಿಸುವ ಮೂಲಕ ಪರ್ಯಾಯ ಉತ್ಪಾದನಾ ತಾಣವಾಗಿ ತನ್ನನ್ನು ತಾನು ಇರಿಸಿಕೊಳ್ಳುತ್ತಿದೆ. ಹಾಗೂ ಭಾರತದ ಪ್ರಭಾವವನ್ನು ಮಿತಿಗೊಳಿಸುವ ಚೀನಾದ ವಿಶಾಲ ಕಾರ್ಯತಂತ್ರಕ್ಕೆ ಇದು ಸರಿಯಾಗಿ ಹೊಂದಿಕೊಳ್ಳುತ್ತದೆ.

ಉಡುಪು ಆಮದಿನ ಮೇಲೆ ಭಾರತದ ಕಾರ್ಯತಂತ್ರದ ನಡೆ

ಭಾರತವು ಬಾಂಗ್ಲಾದೇಶದಿಂದ ಉಡುಪು ಆಮದನ್ನು ನಿರ್ಬಂಧಿಸಲು ನಿರ್ಧರಿಸಿದೆ, ಏಕೆಂದರೆ ಈ ವಲಯದಲ್ಲಿ ಕಾರ್ಮಿಕ-ತೀವ್ರ ಉದ್ಯೋಗಗಳನ್ನು ಆಕರ್ಷಿಸಲು ಭಾರತ ಪ್ರಯತ್ನಿಸುತ್ತಿದೆ. ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದಗಳಿಂದಾಗಿ ಭಾರತದ ಜವಳಿ ವಲಯವು ಏರಿಕೆಯನ್ನು ಕಾಣಬಹುದು. ಭಾರತವು ತನ್ನ ಉಡುಪು ರಫ್ತಿಗಾಗಿ ಯುಕೆ ಮಾರುಕಟ್ಟೆಗೆ ಈಗಾಗಲೇ ಸುಂಕ-ಮುಕ್ತ ಪ್ರವೇಶವನ್ನು ಪಡೆದುಕೊಂಡಿದೆ ಮತ್ತು EU ಮತ್ತು US ಜೊತೆಗಿನ ತನ್ನ ವ್ಯಾಪಾರ ಒಪ್ಪಂದಗಳಲ್ಲಿ ಇದೇ ರೀತಿಯ ಸೌಲಭ್ಯ ಪಡೆಯಲು ಬಯಸಿದೆ.

ಚೀನಾದ ಸುಂಕ ರಹಿತ ಬಟ್ಟೆ ಆಮದು ಮತ್ತು ರಫ್ತು ಸಬ್ಸಿಡಿಗಳಿಂದ ಲಾಭ ಪಡೆಯುವ ಬಾಂಗ್ಲಾದೇಶದ ರಫ್ತುದಾರರು ಪಡೆಯುತ್ತಿರುವ ಸ್ಪರ್ಧಾತ್ಮಕ ಪ್ರಯೋಜನವನ್ನು ಭಾರತೀಯ ಜವಳಿ ಸಂಸ್ಥೆಗಳು ಬಹಳ ಹಿಂದಿನಿಂದಲೂ ಪ್ರತಿಭಟಿಸುತ್ತಿವೆ ಎಂದು ಥಿಂಕ್ ಟ್ಯಾಂಕ್ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್ಐ) ಹೇಳಿದೆ.

ಬಾಂಗ್ಲಾದೇಶದಿಂದ ನಿರ್ಬಂಧಗಳು

ಬಾಂಗ್ಲಾದೇಶ ಇತ್ತೀಚೆಗೆ ಭೂ ಬಂದರುಗಳ ಮೂಲಕ ಭಾರತೀಯ ನೂಲಿನ ರಫ್ತಿಗೆ ಬಂದರು ನಿರ್ಬಂಧಗಳನ್ನು ವಿಧಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಭಾರತೀಯ ನೂಲು ರಫ್ತಿಗೆ ಬಂದರುಗಳ ಮೂಲಕ ಮಾತ್ರ ಅವಕಾಶ ನೀಡಲಾಗಿದೆ. ಇದರೊಂದಿಗೆ ಬಾಂಗ್ಲಾದೇಶದ ಸಿದ್ಧ ಉಡುಪು ಉದ್ಯಮಕ್ಕೆ ಭೂ ಮಾರ್ಗವು ತ್ವರಿತ ಮತ್ತು ಅಗ್ಗದ ನೂಲು ಪೂರೈಕೆಯನ್ನು ನೀಡುತ್ತಿದ್ದರೂ, ಬಾಂಗ್ಲಾದೇಶದ ಜವಳಿ ಗಿರಣಿಗಳ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಇದನ್ನು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ ಚೀನಾದ ಸಹಾಯದಿಂದ ಅಭಿವೃದ್ಧಿಪಡಿಸಲಾದ ಹೆಚ್ಚಿನ ಸಂಖ್ಯೆಯ ಮೂಲಸೌಕರ್ಯ ಯೋಜನೆಗಳು ಬಾಂಗ್ಲಾದೇಶದಲ್ಲಿವೆ. ಇನ್ನು ಬಾಂಗ್ಲಾದೇಶವು ಜಾಗತಿಕವಾಗಿ ಚೀನಾದ ಎರಡನೇ ಅತಿದೊಡ್ಡ ಮಿಲಿಟರಿ ಹಾರ್ಡ್‌ವೇರ್ ಖರೀದಿದಾರರಾಗಿದ್ದು, 2016 ಮತ್ತು 2020 ರ ನಡುವಿನ ಅವಧಿಯಲ್ಲಿ ಚೀನಾದ ಒಟ್ಟು ರಫ್ತಿನ ಐದನೇ ಒಂದು ಭಾಗದಷ್ಟಿದೆ.

Commenti


Top Stories

bottom of page