2 ಬೈಕುಗಳ ನಡುವೆ ಡಿಕ್ಕಿ : ಬೈಕ್ ಸವಾರ ಮೃತ
- Ananthamurthy m Hegde
- Nov 8, 2024
- 1 min read

ಸಿದ್ದಾಪುರ : ೨ ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಬೈಕ್ ಸವಾರ ಮೃತಪಟ್ಟ ಘಟನೆ ಸಿದ್ದಾಪುರ ಶಿರಸಿ ಮುಖ್ಯ ರಸ್ತೆಯ ವಿದ್ಯಾಗಿರಿ ಕ್ರಾಸ್ ಬಳಿ ನಡೆದಿದೆ. ಗಾಯಳುವನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತ ಪಟ್ಟಿರುವುದಾಗಿ ದೂರು ದಾಖಲಾಗಿದೆ.
ಕೆಟಿಎಂ ಬೈಕ್ ಸವಾರ ಕುರುವಂತೆಯ ಸಂದೀಪ ತನ್ನ ಬೈಕನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿದ್ಯಾಗಿರಿ ಬಳಿ ಇಂಡಿಕೇಟರ್ ಹಾಕಿಕೊಂಡು ಬಲಕ್ಕೆ ತಿರುಗುತ್ತಿದ್ದ ಬೈಕ್‌ಗೆ ಹಿಂದಿನಿAದ ಬಂದು ಡಿಕ್ಕಿ ಹೊಡೆಸಿದ್ದಾನೆ ಪರಿಣಾಮ ಬೈಕ್ ಸವಾರ ರಾಧಾಕೃಷ್ಣ (೭೨) ಎನ್ನುವವರಿಗೆ ಗಂಭೀರ ಗಾಯವಾಗಿ ಮೃತಪಟಿದ್ದಾನೆ. ಗಂಡನ ಸಾವಿಗೆ ಕಾರಣನಾದ ಬೈಕ್ ಸವಾರ ಸಂದೀಪ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಲಕ್ಷ್ಮಿ ರಾಧಾಕೃಷ್ಣ ಸಬನಿಸ್ ವಿದ್ಯಾಗಿರಿ ದೂರು ನೀಡಿದ್ದಾರೆ.














Comments