21ನೇ ಜಾನುವಾರು ಗಣತಿಗೆ ಶಾಸಕ ಭೀಮಣ್ಣ ಚಾಲನೆ
- Ananthamurthy m Hegde
- Dec 24, 2024
- 1 min read
ಸಿದ್ದಾಪುರ : ತಾಲೂಕಿನ ಕಟ್ಟೆಕೈನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪಶು ಸಂಗೋಪನ ಇಲಾಖೆ ವತಿಯಿಂದ ಜಾನುವಾರು ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಗೋವುಗಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಕೃಷಿ ಗೆ ಯಂತ್ರೋಪಕರಣ ಬಂದ ನಂತರದಲ್ಲಿ ಜಾನುವಾರು ಸಾಕಣಿಕೆ ಕಡಿಮೆ ಮಾಡಿದ್ದಾರೆ. ಹೀಗೆ ಎಲ್ಲ ರೈತರು ಪಶು ಸಾಕಾಣಿಕೆ ಕಡಿಮೆ ಮಾಡಿದರೆ ರೈತರಿಗೆ ಬೇಕಾದ ಗೊಬ್ಬರ ಹಾಗೂ ಹಾಲು ಉತ್ಪನ್ನಗಳಿಗೆ ತೊಂದರೆ ಉಂಟಾಗುತ್ತದೆ ಸರಕಾರದ ಸೌಲಭ್ಯ ಪಡೆದುಕೊಂಡು ಒಂದು ಮನೆಯಲ್ಲಿ ಕನಿಷ್ಠ ಒಂದು ಜಾನುವಾರು ಸಾಕಾಣಿಕೆ ಮಾಡಬೇಕು ಎಂದರು.
ಇದಕ್ಕೂ ಮೊದಲು ಶಾಸಕರು ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಿಳೇಗೋಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಿದ ಕಾಲು ಸಂಕ ಉದ್ಘಾಟಿಸಿದರು ಮತ್ತು ಕುಮಟಾ-ಕೊಡಮಡಗಿ ರಾಜ್ಯ ಹೆದ್ದಾರಿಯಿಂದ ಕೋಡಿಗದ್ದೆ, ಸಾಲ್ಕೋಡ, ಹೊನ್ನಾವರ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ 21 ನೇ ಜಾನುವಾರು ಗಣತಿಗೆ ಚಾಲನೆ ನೀಡಲಾಯಿತು.
Comments