top of page

372 ದಿನಗಳ ಗಾಯತ್ರೀ ಮಹಾಸತ್ರ ಸಂಪನ್ನ : ಸಮಾರೋಪದಲ್ಲಿ ರಾಘವೇಶ್ವರ ಶ್ರೀ ಭಾಗಿ

  • Writer: Ananthamurthy m Hegde
    Ananthamurthy m Hegde
  • Nov 5, 2024
  • 1 min read

ಸಿದ್ದಾಪುರ: ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಕಳೆದ ೩೭೨ ದಿನಗಳ ಕಾಲ ನಿರಂತರವಾಗಿ ನಡೆದಿದ್ದ ಗಾಯತ್ರೀ ಮಹಾಸತ್ರದ ಸಮಾರೋಪ ಸಮಾರಂಭದ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳು ಸೋಮವಾರ ಕಲಗದ್ದೆಗೆ ಆಗಮಿಸಿದರು.

ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ದಂಪತಿಗಳು ಶ್ರೀಗಳನ್ನು ಬರಮಾಡಿಕೊಂಡರು.

ದೇವರ ದರ್ಶನದ ಬಳಿಕ ನೂತನವಾಗಿ ನಿರ್ಮಾಣಗೊಂಡ 'ಸಾವಿತ್ರಂ' ಯಾಗ ಶಾಲೆಯನ್ನು ಲೋಕಾರ್ಪಣೆಗೊಳಿಸಿದರು. ಮುಂಜಾನೆಯಿAದ ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಗಣೇಶ ಪೂಜೆ, ರುದ್ರ ಹೋಮ, ಗಾಯತ್ರೀ ಹವನ, ಮಹಾಮಂಗಳಾರತಿ, ಪ್ರಸಾದ ಭೋಜನ ನಡೆಯಿತು.

ಸಂಜೆ ಡಾ. ಬಂದಗದ್ದೆ ನಾಗರಾಜ ಅವರಿಂದ ವೇದ ಮಾತಾ ಗಾಯತ್ರೀ ಉಪನ್ಯಾಸ ನಡೆಯಿತು.

ಈ ವೇಳೆ ವಿದ್ವಾಂಸ ಗೋಪಾಲಕೃಷ್ಣ ಶರ್ಮಾ, ವಿಷ್ಣುಗುಪ್ತ ವಿವಿಯ ಆಡಳಿತ ಮಂಡಳಿ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಹವ್ಯಕ ಮಹಾ ಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಸಮಿತಿ ಕಾರ್ಯಾಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ, ಸಿದ್ದಾಪುರ ಮಂಡಲದ ಅಧ್ಯಕ್ಷ ಮಹೇಶ ಚಟ್ನಳ್ಳಿ, ಗುರಿಕಾರ ನವೀನ ಹೆಗಡೆ ಕಲಗದ್ದೆ, ಸುವರ್ಣ ಪಾದುಕಾ ವಿಭಾಗದ ಸಂಚಾಲಕ ಭಾಸ್ಕರ ಹೆಗಡೆ ಕೊಡಗಿಬೈಲ್, ವಿ.ಚಂದ್ರಶೇಖರ ಭಟ್ಟ ಗಾಳಿಮನೆ ಇತರರು ಇದ್ದರು. ಗುಂಜಗೋಡ ಗಣಪತಿ ನಿರ್ವಹಿಸಿದರು.

Comments


Top Stories

bottom of page