top of page

3ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು: ತವರಿನಲ್ಲಿ ರೋಹಿತ್ ಪಡೆಗೆ ತೀವ್ರ ಮುಖಭಂಗ

  • Writer: Ananthamurthy m Hegde
    Ananthamurthy m Hegde
  • Nov 3, 2024
  • 1 min read

ree

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನ ಅಂತಿಮ ಪಂದ್ಯದಲ್ಲಿ ಭಾರತ 0-3 ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊರುತ್ತೇನೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಮತ್ತು ಕೊನೆಯ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ೨೫ ರನ್‌ಗಳಿಂದ ಸೋಲು ಕಂಡಿದ್ದು, ಇದೇ ಮೊದಲ ಬಾರಿಗೆ ತವರಿನಲ್ಲಿ ೦-೩ರ ಅಂತರದಲ್ಲಿ ಸೋತಿದೆ.

'ಇದು ನನ್ನ ವೃತ್ತಿ ಜೀವನದ ಅತ್ಯಂತ ಕೆಟ್ಟ ಸರಣಿ. ತವರಿನಲ್ಲಿ ಈ ರೀತಿ ಸೋತಿದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ' ಎಂದು ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

'ಸರಣಿ ಪಂದ್ಯಗಳಲ್ಲಿ ಸೋಲುವುದು ಸುಲಭವಲ್ಲ, ಅದನ್ನು ಸುಲಭವಾಗಿ ಅರಗಿಸಿಕೊಳ್ಳಲೂ ಸಾಧ್ಯವಿಲ್ಲ. ಅತ್ಯುತ್ತಮವಾಗಿ ಆಡಲು ನಮಗೆ ಸಾಧ್ಯವಾಗಲಿಲ್ಲ. ಸರಣಿಯುದ್ದಕ್ಕೂ ನ್ಯೂಜಿಲೆಂಡ್ ಉತ್ತಮವಾಗಿ ಆಡಿದೆ. ನಾವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ. ಮೊದಲ ಎರಡು ಟೆಸ್ಟ್ಗಳಲ್ಲಿ ಮೊದಲ ಇನಿಂಗ್ಸ್ನಲ್ಲಿ ಸಾಕಷ್ಟು ರನ್ ಗಳಿಸಲಿಲ್ಲ. ಈ ಪಂದ್ಯದಲ್ಲಿ ನಾವು ೩೦ ರನ್ (೨೮) ಮುನ್ನಡೆ ಸಾಧಿಸಿದ್ದೆವು. ಹೀಗಾಗಿ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಯಿತು. ಆದರೆ ಒಗ್ಗಟ್ಟಾಗಿ ಆಡವಾಡಲು ಸಾಧ್ಯವಾಗಲಿಲ್ಲ. ಈ ರೀತಿಯ ಗುರಿಯನ್ನು ಬೆನ್ನಟ್ಟುವಾಗ ಸ್ಕೋರ್ ಬೋರ್ಡ್ನಲ್ಲಿ ಕಾಣುವ ರನ್‌ಗಳನ್ನು ನೀವು ನೋಡುತ್ತೀರಿ. ಅದು ನನ್ನ ತಲೆಯಲ್ಲಿತ್ತು. ಅದನ್ನು ಗಳಿಸಲು ಸಾಧ್ಯವಾಗಲಿಲ್ಲ' ಎಂದು ಬೇಸರಿಸಿಕೊಂಡರು.

'ಕೆಲವು ಯೋಜನೆಗಳೊಂದಿಗೆ ನಾನು ಪಂದ್ಯವಾಡಲು ಹೋಗಿದ್ದೆ, ಆದರೆ ಸರಣಿಯಲ್ಲಿ ಅದನ್ನು ಹೊರತರಲು ಸಾಧ್ಯವಾಗಲಿಲ್ಲ. ಹೀಗಾಗಿ ಅತ್ಯುತ್ತಮ ಆಟ ನೀಡಲು ಸಾಧ್ಯವಾಗಲಿಲ್ಲ. ಪರಿಣಾಮ ಈ ಸ್ಥಿತಿಯನ್ನು ಎದುರಿಸಬೇಕಾಯಿತು. ನಾನು ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ಮತ್ತು ಬ್ಯಾಟಿಂಗ್ ಮಾಡುವಲ್ಲಿಯೂ ಅತ್ಯುತ್ತಮನಾಗಲಿಲ್ಲ. ಒಟ್ಟಾರೆ ನಮ್ಮ ಪ್ರದರ್ಶನ ಕಳಪೆಯಾಗಿತ್ತು' ಎಂದರು.

Comments


Top Stories

bottom of page