top of page

ಶುಭಮನ್‌ ಗಿಲ್‌ ಐತಿಹಾಸಿಕ ಸಾಧನೆ

Writer: Ananthamurthy m Hegde
Ananthamurthy m Hegde
Jul 6, 2025
1 min read

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ನಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ. 4ನೇ ದಿನದ ಅಂತ್ಯಕ್ಕೆ ಭಾರತ 536 ರನ್‌ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ 72 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದೆ. ಭಾರತದ ಐತಿಹಾಸಿಕ ಗೆಲುವಿಗೆ ಇನ್ನು 7 ವಿಕೆಟ್‌ಗಳು ಬೇಕಿವೆ. ಭಾರತ ತಂಡದ ಈ ಮುನ್ನಡೆಗೆ ಕಾರಣವಾಗಿದ್ದು ನಾಯಕ ಶುಭಮನ್‌ ಗಿಲ್‌ ಅವರ ಆಕರ್ಷಕ ಬ್ಯಾಟಿಂಗ್!‌ ಒಂದೇ ಪಂದ್ಯದಲ್ಲಿ ಐದು ದಾಖಲೆಗಳನ್ನು ಮುರಿಯುವ ಮೂಲಕ ಈ ಸಾಧನೆ ಮಾಡಿದ ಮೊಲದ ಆಟಗಾರ ಎಂಬ ಹೆಗ್ಗಳಿಕೆಗೂ ಶುಭಮನ್‌ ಗಿಲ್‌ ಪಾತ್ರರಾಗಿದ್ದಾರೆ.

ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್ ಗಳಿಸಿದ್ದ ಗಿಲ್, ಎರಡನೇ ಇನಿಂಗ್ಸನಲ್ಲಿ 161 ರನ್ ಗಳಿಸಿ ಭಾರತವನ್ನು ಸುಸ್ಥಿತಿಯಲ್ಲಿ ಇರಿಸಿದ್ದಾರೆ. ಗಿಲ್‌ ಅವರ ಮನಮೋಹಕ ಆಟದ ನೆರವಿನಿಂದ ಭಾರತ 608 ರನ್‌ಗಳ ಬೃಹತ್‌ ಮುನ್ನಡೆಯನ್ನು ಗಳಿಸಿ ಪಂದ್ಯವನ್ನು ಡಿಕ್ಲೇರ್‌ ಮಾಡಿಕೊಂಡಿದೆ. ಈ ಪಂದ್ಯದ ಮೂಲಕ ನಾಯಕ ಶುಭಮನ್‌ ಗಿಲ್‌ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದ್ದಾರೆ. ಟೆಸ್ಟ್‌ ಕ್ರಿಕೆಟ್‌ನ 148 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ

ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಮತ್ತು 150 ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಗಿಲ್‌ ಪಾತ್ರರಾಗಿದ್ದಾರೆ.

Comments


Top Stories

1/322
bottom of page