ಕೆನೋಪಿಯಲ್ಲಿ ಆಯತಪ್ಪಿ ಬಿದ್ದು ಯುವಕ ಸಾವು
- Ananthamurthy m Hegde
- Dec 28, 2024
- 1 min read

ಭಟ್ಕಳ: ಮನೆಯ ಕೆನೊಪಿಯಲ್ಲಿ ಆಯತಪ್ಪಿ ಬಿದ್ದು ಅಧಿಕ ರಕ್ತಸೋರಿಕೆಯಿಂದ ಆಸ್ಪತ್ರೆ ಸೇರಿದ್ದ ಯುವಕನೋರ್ವ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನ ೧.೩೦ಕ್ಕೆ ಮೃತಪಟ್ಟಿದ್ದು, ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸ್ತುತ ಮುರ್ಡೇಶ್ವರದಲ್ಲಿ ವಾಸಿಸುತ್ತಿದ್ದ ಕುಮಟಾದ ಗಾಂಧಿನಗರದ ನಿವಾಸಿ ಅನೂಪ ನಾಗೇಶ ಶೆಟ್ಟಿ(೩೫) ಮೃತ ಯುವಕ. ಇವರು ಭಟ್ಕಳದ ಸರ್ವೇ ಕಚೇರಿಯಲ್ಲಿ ಸರ್ವೇಯರ್ ಆಗಿ ವೃತ್ತಿ ಮಾಡುತ್ತಿದ್ದರು. ಹೆಂಡತಿ ಮಕ್ಕಳೊಂದಿಗೆ ಮುರ್ಡೇಶ್ವರದ ಸಣಬಾವಿಯ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ ೧೦:೦೦ ಗಂಟೆ ಸುಮಾರಿಗೆ ವಾಸವಿದ್ದ ಬಾಡಿಗೆ ಮನೆಯ ಕೆನೊಪಿಯಲಿ ಆಯ ತಪ್ಪಿ ಮನೆಯ ಮುಂಬದಿಯ ಕಿಟಕಿಯ ಮೇಲೆ ಕೈ ಉರಿ ಗಾಜಿನ ಮೇಲೆ ಬಿದ್ದ ಪರಿಣಾಮ ಆತನ ಬಲಗೈ ಮುಂಗೈ ಮೇಲಿನ ರಕ್ತ ನಾಳಕ್ಕೆ ಗಾಯವಾಗಿ ರಕ್ತ ಸ್ರಾವವಾಗಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವಿಪರೀತ ರಕ್ತ ಸ್ರಾವವಾಗಿ ಶುಕ್ರವಾರ ನಸುಕಿನ ಜಾವ ಮೃತಪಟ್ಟಿದ್ದಾರೆ. ಈ ಕುರಿತು ಮೃತರ ತಂದೆ ನಾಗೇಶ ಶೆಟ್ಟಿ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Comments