top of page

‘ಚಾಂಪಿಯನ್‌ʼ ಭಾರತಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

  • Writer: Ananthamurthy m Hegde
    Ananthamurthy m Hegde
  • Mar 10
  • 1 min read

ದುಬೈ: ಸ್ಪಿನ್ನರ್‌ಗಳ ಜಾದು ಮತ್ತು ರೋಹಿತ್‌ ಶರ್ಮಾ ಹಾಗೂ ಶ್ರೇಯಸ್‌ ಅಯ್ಯರ್‌ ಅವರ ಉತ್ತರದಾಯಿತ್ವದ ಬ್ಯಾಟಿಂಗ್‌ ಸಾಹಸದಿಂದ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ4 ವಿಕೆಟ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಮಣಿಸಿ, ಅರಬ್‌ ನಾಡಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿತು. ಜತೆಗೆ 25 ವರ್ಷಗಳ ಹಿಂದಿನ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಚಾಂಪಿಯನ್ಸ್‌ ಟ್ರೋಫಿ ಇತಿಹಾಸದಲ್ಲಿ ಭಾರತ 3ನೇ ಸಲ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಇದು ತಂಡವೊಂದರ ಶ್ರೇಷ್ಠ ಸಾಧನೆಯಾಗಿದೆ. 2 ಬಾರಿ ಪ್ರಶಸ್ತಿ ಗೆದ್ದಿರುವ ಆಸೀಸ್‌ ದ್ವಿತೀಯ ಸ್ಥಾನದಲ್ಲಿದೆ. 2002ರಲ್ಲಿ ಶ್ರೀಲಂಕಾ ತಂಡದೊಂದಿಗೆ ಪ್ರಶಸ್ತಿ ಹಂಚಿಕೊಂಡಿದ್ದ ಭಾರತ, 2013ರಲ್ಲಿ 2ನೇ ಬಾರಿ ಚಾಂಪಿಯನ್‌ ಆಗಿತ್ತು. 2017ರಲ್ಲಿ ಪಾಕಿಸ್ತಾನ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಟೀಮ್‌ ಇಂಡಿಯಾ, 12 ವರ್ಷಗಳ ನಂತರ ಜಾಗತಿಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಅತ್ತ 25 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದ ನ್ಯೂಜಿಲೆಂಡ್‌ ವೀರೋಚಿತ ಸೋಲನುಭವಿಸಿ, 2ನೇ ಬಾರಿ ರನ್ನರ್‌ ಅಪ್‌ಗೆ ತೃಪ್ತಿ ಪಡಬೇಕಾಯಿತು.


ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಎಂಟು ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಜಯಿಸಿರುವ ಭಾರತ ತಂಡಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯಿಂದ 20 ಕೋಟಿ ರೂ.ಗಳ ಬೃಹತ್ ನಗದು ಬಹುಮಾನ ಸಿಕ್ಕಿದೆ. ಎರಡನೇ ಸ್ಥಾನ ಪಡೆದ ನ್ಯೂಜಿಲೆಂಡ್ ತಂಡಕ್ಕೆ 9.72 ಕೋಟಿ ರೂ. ಬಹುಮಾನ ನೀಡಲಾಗಿದೆ. ಟೂರ್ನಿಯಲ್ಲಿ ನ್ಯೂಜಿಲೆಂಡ್‌ ಪರವಾಗಿ ಉತ್ತಮ ಪ್ರದರ್ಶನ ನೀಡಿದ ರಚಿನ್‌ ರವೀಂದ್ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

2025ರ ಚಾಂಪಿಯನ್ಸ್‌ ಟ್ರೋಫಿಯಲ್ಲಿಅತ್ಯಧಿಕ ರನ್‌ ಗಳಿಸಿದವರು:

ಆಟಗಾರ

ಪಂದ್ಯ

ರನ್‌

ಅತ್ಯಧಿಕ

ಸರಾಸರಿ

ಶತಕ

ಅರ್ಧ ಶತಕ

ರಚಿನ್‌ ರವೀಂದ್ರ

4

263

112

65.75

02

00

ಶ್ರೇಯಸ್‌ ಅಯ್ಯರ್

‌5

243

79

48.60

00

02

ಬೆನ್‌ ಡಕೆಟ್

‌3

227

165

75.66

01

00

ಜೋ ರೂಟ್

‌3

225

120

75.00

01

01

ವಿರಾಟ್‌ ಕೊಹ್ಲಿ

5

218

100

54.59

01

01


2025ರ ಚಾಂಪಿಯನ್ಸ್‌ ಟ್ರೋಫಿಯಲ್ಲಿಅತ್ಯಧಿಕ ವಿಕೆಟ್‌ ಪಡೆದವರು:

ಆಟಗಾರ

ಪಂದ್ಯ

ವಿಕೆಟ್

ಶ್ರೇಷ್ಠ

ಎಕಾನಮಿ

ಮ್ಯಾಟ್‌ ಹೆನ್ರಿ

4

10

42ಕ್ಕೆ 5

5.32

ವರುಣ್‌ ಚಕ್ರವರ್ತಿ

3

9

42ಕ್ಕೆ 5

4.52

ಮೊಹಮ್ಮದ್‌ ಶಮಿ

5

8

53ಕ್ಕೆ 5

5.10

ಅಜ್ಮತ್‌ಉಲ್ಲಾಒಮರ್‌ಝೈ

3

7

58ಕ್ಕೆ 5

6.72

ಬೆನ್‌ ದ್ವಾರ್ಶುಯಿಸ್‌

3

7

47ಕ್ಕೆ 3

5.84

ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಇನಿಂಗ್ಸ್‌ನಲ್ಲಿ ಭಾರತದ ಸ್ಪಿನ್‌ ಬೌಲರ್‌ಗಳು 38 ಓವರ್‌ ಎಸೆದಿದ್ದಾರೆ. ಇದು 2ನೇ ಗರಿಷ್ಠ ಓವರ್‌ ಆಗಿದೆ. 2002ರ ಸೆಮಿಫೈನಲ್‌ನಲ್ಲಿಆಸ್ಪ್ರೇಲಿಯಾ ವಿರುದ್ಧ ಶ್ರೀಲಂಕಾ ಸ್ಪಿನ್ನರ್‌ಗಳು 39.4 ಓವರ್‌ಗಳನ್ನು ಎಸೆದಿದ್ದು, ಈವರೆಗಿನ ಗರಿಷ್ಠ ದಾಖಲೆಯಾಗಿತ್ತು.

Comments


Top Stories

bottom of page