ನೇತ್ರಾಣಿಯಲ್ಲಿ ಮುಳುಗುವ ಸ್ಥಿತಿ ತಲುಪಿದ ಬೋಟ್ : ತಪ್ಪಿದ ಭಾರೀ ಅನಾಹುತ
- Ananthamurthy m Hegde
- 2 days ago
- 1 min read
ಭಟ್ಕಳ: ಕಾಯ್ಕಿಣಿ ಗ್ರಾಮದ ಅಣ್ಣಪ್ಪ ಮೊಗೇರ ಅವರ ಮಾಲಿಕತ್ವದ “ಮಹಾ ಮುರುಡೇಶ್ವರ” ಹೆಸರಿನ ಪರ್ಷಿಯನ್ ಬೋಟ್ ಸೋಮವಾರ ಬೆಳಿಗ್ಗೆ ನೇತ್ರಾಣಿ ದ್ವೀಪದ ಹತ್ತಿರ ಸಮುದ್ರದಲ್ಲಿ ನೀರು ತುಂಬಿ ಮುಳುಗುವ ಸ್ಥಿತಿಗೆ ತಲುಪಿದ ಘಟನೆ ಆತಂಕ ಮೂಡಿಸಿದೆ.
ಅದೃಷ್ಟವಶಾತ್ ಬೋಟ್‌ನಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದು, ಸಮೀಪದಲ್ಲಿದ್ದ ವೆಲ್ಲನ್ಕಿಣಿ–ಮಚ್ಚೆದುರ್ಗ ಬೋಟ್ ಸಿಬ್ಬಂದಿ ತಕ್ಷಣವೇ ನೆರವಿಗೆ ಧಾವಿಸಿ ಜೀವ ರಕ್ಷಣೆ ಮಾಡಿದ್ದಾರೆ.
ಮೂಲಗಳ ಪ್ರಕಾರ, ಬೋಟ್ ಮುಳುಗುವ ಮುನ್ನವೇ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಲಾಗಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ಪರಿಣಾಮ ಯಾವುದೇ ಪ್ರಾಣಾಪಾಯ ತಪ್ಪಿದೆ.
Comments