top of page

ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾ ಉಸ್ತುವಾರಿ ವಿರುದ್ಧ ಅವಹೇಳನಕಾರಿ ಪೋಸ್ಟ್ ; ಇಬ್ಬರ ಬಂಧನ

  • Writer: Ananthamurthy m Hegde
    Ananthamurthy m Hegde
  • Jun 7
  • 1 min read
ree

ಪೇಸ್ ಬುಕ್ ಖಾತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವಮಾನ ಆಗುವ ರೀತಿಯಲ್ಲಿ

1 ನಿಮಿಷ 29 ಸೆಕೆಂಡ್ ಸಮಯ ಇರುವ ವಿಡಿಯೊವನ್ನು ಹರಿಬಿಟ್ಟು ಜನರಿಗೆ ತಪ್ಪು ಸಂದೇಶ ಸಾರಿದ ಇಬ್ಬರು ವ್ಯಕ್ತಿಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ

ನಾಗರಾಜ ಮಾದೇವ ನಾಯ್ಕ ದೊಡ್ಡಬಳಸೆ,ಬೈಲೂರು , ಬಾಸ್ಕರ ನಾರಾಯಣ ದೇವಾಡಿಗ ಸಣ್ಣಬಳಸೆ, ಬೈಲೂರು ಎಂದು ತಿಳಿದು ಬಂದಿದೆ. ಇವರು "ಭಟ್ಕಳಕ್ಕೆ ಬದಲಾವಣೆ" ಎಂಬ ಪೇಸ್ ಬುಕ್ ಖಾತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ

ಉದ್ದೇಶ ಪೂರ್ವಕವಾಗಿ ಅವಮಾನ ಆಗುವ ರೀತಿಯಲ್ಲಿ ಸುಮಾರು 1 ನಿಮಿಷ 29 ಸೆಕೆಂಡ್ ಸಮಯ ಇರುವ ವಿಡಿಯೊವನ್ನು ಹರಿಬಿಟ್ಟು ಜನರಿಗೆ ತಪ್ಪು ಸಂದೇಶವನ್ನು ತಲುಪಿಸಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಜುಗರ ಉಂಟು ಮಾಡಿದ್ದು, ಹಾಗೂ ಒಂದು ಪಕ್ಷದ ಕಾರ್ಯಕರ್ತರು ಸಾರ್ವಜನಿಕ ನೆಮ್ಮದಿ ವಿರುದ್ದ ಅಪರಾಧ ಎಸಗುವಂತೆ ಮಾಡುವ ಉದ್ದೇಶವುಳ್ಳ ಮತ್ತು ಒಂದು ಪಕ್ಷದ ಕಾರ್ಯಕರ್ತರು ಯಾವುದೆ ಅಪರಾಧವನ್ನು ಮಾಡುವಂತೆ ಪ್ರಚೋದಿಸುವ ಉದ್ದೇಶವುಳ್ಳ ಹೇಳಿಕೆಯನ್ನು ಸುಳ್ಳು ಮಾಹಿತಿಯನ್ನು ಅಥವಾ ಗಾಳಿಸುದ್ದಿಯನ್ನು ಸಾಮಾಜಿಕ ಜಾಲತಾಣವಾದ ಪೇಸಬುಕ ಖಾತೆಯಿಂದ ಇರರರಿಗೆ ಶೇರ್ ಮಾಡಿದ್ದು, ಪ್ರಕರಣದಲ್ಲಿ ಆಪಾದಿತರಾದ "ಭಟ್ಕಳಕ್ಕೆ ಬದಲಾವಣೆ" ಎಂಬ ಹೆಸರಿನ ಪೇಸ್‌ಬುಕ್ ಖಾತೆದಾರ ಭಾಸ್ಕರ ದೇವಡಿಗ ನಾಗರಾಜ. ಎಂ ನಾಯ್ಕ ಹಿಂದೂ ಎಂಬ ಹೆಸರಿನ ಪೇಸ್‌ಬುಕ್ ಖಾತೆದಾರ ತೇಜು ನಾಯ್ಕ ಹೊನ್ನಾವರ ಎಂಬ ಹೆಸರಿನ ಪೇಸ್‌ಬುಕ್ ಖಾತೆದಾರ ಹಾಗೂ ಇತರರೂ, ಇವರ ಮೇಲೆ ಕಾನೂನು ಕ್ರಮ ಜರುಗಿಸ ಬೇಕೆಂದು ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments


Top Stories

bottom of page