ಟೂರಿಸ್ಟ್ ಬಸ್ ಪಲ್ಟಿ: ೬ ಜನರಿಗೆ ಗಂಭೀರ ಗಾಯ
- Ananthamurthy m Hegde
- Dec 28, 2024
- 1 min read

ಹೊನ್ನಾವರ: ಇಲ್ಲಿನ ಹುಲಿಯಪ್ಪನ ಕಟ್ಟೆ ಹತ್ತಿರದ ಬಾಳೆಗದ್ದೆ ತಿರುವಿನಲ್ಲಿ ಬೆಳಿಗ್ಗೆ 8 ಗಂಟೆಗೆ ಟೂರಿಸ್ಟ್ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಬೆಂಗಳೂರಿನಿಂದ ಗೋಕರ್ಣದ ಕಡೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು ಬಸ್ಸಿನಲ್ಲಿದ್ದ ಆರು ಜನರಿಗೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಕರೆದೊಯ್ಯುವಂತೆ ತಾಲೂಕು ಸರಕಾರಿ ಆಸ್ಪತ್ರೆ ವೈದ್ಯರು ಸೂಚಿಸಿದ್ದಾರೆ. ಬಸ್ಸಿನಲ್ಲಿ ಇನ್ನುಳಿದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಪೆಟ್ಟಾಗಿದ್ದು ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಾಳೆಗದ್ದೆ ತಿರುವಿನಲ್ಲಿ ನಿರಂತರ ಅಪಘಾತಗಳು ನಡೆಯುತ್ತಿದ್ದು ಹೆದ್ದಾರಿ ಇಲಾಖೆಯ ನಿರ್ಲಕ್ಷಕ್ಕೆ ಪ್ರಯಾಣಿಕರು ಜೀವ ತೇರುತ್ತಿದ್ದಾರೆ.
Comentarios