Yallapura Bear attack | ದಾಳಿ ಮಾಡಿದ ಕರಡಿ ಜೊತೆ ಸೆಣೆಸಾಟ ಇಬ್ಬರು ಗಂಭೀರ
- Oct 21, 2024
- 1 min read
Updated: Oct 22, 2024
ಯಲ್ಲಾಪುರ News :- ಹೊಲಕ್ಕೆ ತೆರಳಿದ್ದ ಮಹಿಳೆ ಹಾಗೂ ಆಕೆಯನ್ನು ರಕ್ಷಣೆಗೆ ತೆರಳಿದ ವ್ಯಕ್ತಿಯಮೇಲೆ ಕರಡಿ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಳಬೈಲ್ ಬಳಿ

ಯಲ್ಲಾಪುರ News :- ಹೊಲಕ್ಕೆ ತೆರಳಿದ್ದ ಮಹಿಳೆ ಹಾಗೂ ಆಕೆಯನ್ನು ರಕ್ಷಣೆಗೆ ತೆರಳಿದ ವ್ಯಕ್ತಿಯಮೇಲೆ ಕರಡಿ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಳಬೈಲ್ ಬಳಿ ನಡೆದಿದೆ.
ಜಾನು ಗೌಳಿ(55) ಕರಡಿ (Bear attack ) ದಾಳಿಗೊಳಗಾದ ಮಹಿಳೆಯಾಗಿದ್ದು ಈಕೆಯ ರಕ್ಷಣೆಗೆ ತೆರಳಿದ ಕೇಶವ ಗೌಳಿ(55) ಕರಡಿ ದಾಳಿಗೆ ಒಳಗಾದವರಾಗಿದ್ದಾರೆ.
ಇದನ್ನೂ ಓದಿ:-Yallapura|ಸಾತೋಡಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರೇ ಎಚ್ಚರ! ಕಾರಣ ಏನು ವಿವರ ನೋಡಿ.
ದನ ಮೇಯಿಸಲು ಕಾಡಿಗೆ ತೆತಳಿದ್ದ ತೆರಳಿದ್ದ ವೇಳೆ ಕರಡಿ ಏಕಾ ಏಕಿ ದಾಳಿ ನಡೆಸಿದ್ದು ಮಹಿಳೆ ಎಡಗೈ ಗೆ ಗಂಭೀರ ಗಾಯವಾದರೇ ರಕ್ಷಣೆಗೆ ಹೋದ ಕೇಶವ ಗೂ ತಲೆ ಹಾಗೂ ಕೈಗಳಿಗೆ ಪರಚಿದ ಗಾಯವಾಗಿದೆ.
ಗಾಯಾಳುಗಳನ್ನು ಯಲ್ಲಾಪುರ (yallapura) ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Comments