ಅಗಳಗದ್ದೆ ಹಳ್ಳದ ಕಾಲುಸಂಕ ಉದ್ಘಾಟಿಸಿದ ಶಾಸಕ ಭೀಮಣ್ಣ
- Ananthamurthy m Hegde
- Oct 30, 2024
- 1 min read

ಸಿದ್ದಾಪುರ: ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ತಾಲೂಕಿನ ಬಿದ್ರಕಾನ ಪಂಚಾಯತ ವ್ಯಾಪ್ತಿಯಲ್ಲಿ 2023-2024ನೇ ಸಾಲಿನ 5054 ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ಸೇತುವೆ ಯೋಜನೆಯಡಿಯಲ್ಲಿ ಮಂಜೂರಾದ ಅಗಳಗದ್ದೆ ಹಳ್ಳದ ಕಾಲುಸಂಕವನ್ನ ಮಂಗಳವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಅನೇಕರು ಅನೇಕ ರೀತಿಯಲ್ಲಿ ಹೇಳುತ್ತಾ ಇರುತ್ತಾರೆ. ಅದಕ್ಕೆಲ್ಲ ಕಿವಿ ಕೊಡುವುದು ಬೇಡ ನಮ್ಮ ಸರಕಾರ ಜನಪರವಾಗಿದೆ, ಗ್ರಾಮೀಣ ಭಾಗದ ಅಭಿವೃದ್ಧಿ ನಾವು ನೀವೆಲ್ಲರೂ ಕೂಡಿಕೊಂಡು ಮಾಡೋಣ, ಇವತ್ತು ಉದ್ಘಾಟನೆಗೊಂಡ ಸೇತುವೆಯನ್ನು ಬಳಸಿಕೊಂಡು ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಮುಖಂಡರು, ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.














Comments