ಅಚ್ಚೇಕೇರಿಯಲ್ಲಿ ರಂಜಿಸಿದ ತಾಳಮದ್ದಲೆ
- Ananthamurthy m Hegde
- Nov 22, 2024
- 1 min read
ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಅಚ್ಚೆಕೇರಿಯಲ್ಲಿ ದಿ.ವೆಂಕಟರಮಣ ಭಟ್ಟ ಸ್ಮರಣಾರ್ಥ ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಕಲಾವಿದರಿಂದ ಶ್ರೀಕೃಷ್ಣ ಪರಂಧಾಮ ತಾಳಮದ್ದಲೆ ನಡೆಯಿತು.
ಕಾರ್ಯಕ್ರಮವನ್ನು ವೇ.ಅನಂತ ಭಟ್ಟ ಹರಿಮನೆ ಉದ್ಘಾಟಿಸಿದರು. ಡಾ.ಶಂಕರ ಭಟ್ಟ ಬಾಲೀಗದ್ದೆ, ವೇ.ಶಿವರಾಮ ಭಟ್ಟ ಬೆಳಖಂಡ, ಸಂಘಟಕರಾದ ಉಮೇಶ ಭಟ್ಟ, ಮಂಜುನಾಥ ಭಟ್ಟ, ಗುರುಪ್ರಸನ್ನ ಭಟ್ಟ ಉಪಸ್ಥಿತರಿದ್ದರು.
ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ, ಮಹಾಬಲೇಶ್ವರ ಭಟ್ಟ ಬೆಳಸೇರು, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ನಾಗಪ್ಪ ಕೋಮಾರ ಭಾಗವಹಿಸಿದ್ದರು.
ಕೃಷ್ಣನಾಗಿ ಡಾ.ಮಹೇಶ ಭಟ್ಟ ಇಡಗುಂದಿ, ದೂರ್ವಾಸನಾಗಿ ನರಸಿಂಹ ಭಟ್ಟ ಕುಂಕಿಮನೆ, ಅರ್ಜುನನಾಗಿ ಡಾ.ಶಿವರಾಮ ಭಾಗ್ವತ ಮಣ್ಕುಳಿ, ಯಶೋದೆಯಾಗಿ ಶಿವರಾಮ ಭಟ್ಟ ಮೊಟ್ಟೆಗದ್ದೆ, ಕೃತವರ್ಮನಾಗಿ ಶ್ರೀಧರ ಅಣಲಗಾರ, ನಾರದನಾಗಿ ದೀಪಕ ಕುಂಕಿ, ಜರನಾಗಿ ನಾರಾಯಣ ಭಟ್ಟ ಮೊಟ್ಟೆಪಾಲ, ಬಲರಾಮನಾಗಿ ನರಸಿಂಹ ಕೋಣೆಮನೆ, ಸಾಂಬನಾಗಿ ಎಂ.ಎನ್.ಭಟ್ಟ ಪಾತ್ರ ಚಿತ್ರಣ ನೀಡಿದರು.












Comments