ಅಡಕೆ ಖರೀದಿದಾರರಿಗೆ ಸನ್ಮಾನ
- Ananthamurthy m Hegde
- Dec 3, 2024
- 1 min read
ಸಿದ್ದಾಪುರ: ಟಿ.ಎಸ್.ಎಸ್ ವಾರ್ಷಿಕ ಸಹಕಾರಿ ಸಭೆಯಲ್ಲಿ ಅಡಿಕೆ ಖರೀದಿದಾರರು, ಸದಸ್ಯರು ಹಾಗೂ ಹಮಾಲರನ್ನು ಸನ್ಮಾನಿಸಲಾಯಿತು.
ಸೋಮವಾರ ಸಂಘದ ಆವಾರದಲ್ಲಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಖರೀದಿದಾರರಾದ ಸುಬ್ರಹ್ಮಣ್ಯ ಟ್ರೇಡರ್ಸ್ ಹರ್ಗಿ, ಸದಸ್ಯರಾದ ಸುಬ್ರಾಯ ಭಟ್ ಸಸಿಮನೆ, ದ್ಯಾವಾ ಗಣಪನ್ ಕಾನಗೋಡ, ಮಂಜುನಾಥ ಹೆಗಡೆ ಕನ್ನಳ್ಳಿ, ಚಂದ್ರಶೇಖರ ಗೌಡ ದುಗಡಿಕೊಪ್ಪ, ರಾಮಕೃಷ್ಣ ಹೆಗಡೆ ಗೋಳಿಕೈ, ವೆಂಕಟ್ರಮಣ ಹೆಗಡೆ ಗೊಂಟನಾಳ, ಯಶೋಧಾ ಹೆಗಡೆ ಮುಗದೂರ, ಶ್ರೀರಾಮ ಹೆಗಡೆ ನೀರಗಾರ, ಸಣ್ಯ ನಾಯ್ಕ ಕುಪ್ಪಗಾರ, ಜಯರಾಮ ಭಟ್ ಗೋಳಿಮನೆ ಹಾಗೂ ಹಮಾಲರಾದ ನಾಗರಾಜ ನಾಯ್ಕ ಕೊಂಡ್ಲಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಎನ್.ಭಟ್ ತೋಟಿಮನೆ ನಿರ್ದೇಶಕರಾದ ರವೀಂದ್ರ ಹೆಗಡೆ ಹಿರೇಕೈ, ಅಶೋಕ ಹೆಗಡೆ, ವಸುಮತಿ ಭಟ್, ಮುಖ್ಯ ವ್ಯವಸ್ಥಾಪಕ ಗಿರೀಶ ಹೆಗಡೆ, ಶಾಖಾ ವ್ಯವಸ್ಥಾಪಕ ರಾಜೀವ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
Comments