top of page

ಅನಾಥ ವ್ಯಕ್ತಿಯನ್ನು ಪುನೀತ್ ರಾಜಕುಮಾರ್ ಆಶ್ರಯಧಾಮಕ್ಕೆ ಸೇರ್ಪಡೆ

  • Writer: Ananthamurthy m Hegde
    Ananthamurthy m Hegde
  • Nov 5, 2024
  • 1 min read

ree

ಸಿದ್ದಾಪುರ: ತಾಲೂಕಿನ ಹೂಕಾರ ಗ್ರಾಮದಲ್ಲಿ ಹಲವು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿ ಅಲೆಯುತ್ತಿದ್ದ ಕೇರಳ ಮೂಲದ ನಟರಾಜ ಮಲಬಾರಿ ಎನ್ನುವ ವೃದ್ಧ ವ್ಯಕ್ತಿಯನ್ನು ಪುನೀತ್ ರಾಜಕುಮಾರ ಆಶ್ರಯಧಾಮಕ್ಕೆ ಸೇರಿಸಿಕೊಳ್ಳಲಾಗಿದೆ.

ಹೂಕಾರ ಗ್ರಾಮದಲ್ಲಿ ಹಲವು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿ ಒಬ್ಬ ವೃದ್ಧ ವ್ಯಕ್ತಿ ಅಲೆಯುತ್ತಿದ್ದು ಊರಿನ ನಾಗರೀಕರು ಆತನಿಗೆ ಊಟ ನೀಡಿ ಆಶ್ರಯ ನೀಡಿದ್ದು ಆದರೆ ಈಗ ಆ ವ್ಯಕ್ತಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದನು. ಈತನ ಮುಂದಿನ ಜೀವನಾಧಾರಕ್ಕಾಗಿ ಅನಾಥಾಶ್ರಮಕ್ಕೆ ಸೇರಿಸುವಂತೆ ಹೂಕಾರಿನ ದಯಾನಂದ ಗೊವಿಂದ ನಾಯ್ಕ ಮತ್ತು ಲಕ್ಷ್ಮಣ ಗೋವಿಂದ ನಾಯ್ಕ ಸಿದ್ದಾಪುರ ಪೋಲೀಸ್ ಠಾಣೆಗೆ ಮನವಿ ಮಾಡಿಕೊಂಡಿದ್ದರು. ಈ ಪ್ರಕಾರ ಸಿದ್ದಾಪುರ ಪೋಲೀಸರು ಅನಾಥ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ಸೇರಿಸಿಕೊಳ್ಳುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಕರೆದುಕೊಂಡು ಬಂದು ಆಶ್ರಯ ನೀಡಲಾಗಿದೆ.

Comments


Top Stories

bottom of page