ಅಪ್ಪು ಆದರ್ಶ ಅಳವಡಿಸಿಕೊಂಡ ಅಭಿಮಾನಿ
- Ananthamurthy m Hegde
- Oct 30, 2024
- 1 min read
ಸಿದ್ದಾಪುರ: ತಾಲೂಕಿನ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬರು ಅವರಂತೆ ನಾವು ಈ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪುನೀತ್ ಅವರ ನಿಧನದ ನಂತರ ತಾವು ನಡೆಸುತ್ತಿರುವ ಅನಾಥಾಶ್ರಮಕ್ಕೆ ಪುನೀತ್ ರಾಜಕುಮಾರ್ ಹೆಸರಿಟ್ಟು ಎಷ್ಟೋ ಅನಾಥರಿಗೆ ಬದುಕು ಕಲ್ಪಿಸಿಕೊಟ್ಟಿದ್ದಾರೆ. ಅನಾಥರ ಸೇವೆ ನಡೆಸುತ್ತಿರುವ ನಾಗರಾಜ ನಾಯ್ಕ ದಂಪತಿಗಳು ಅನಾಥರ ಬಾಳಿಗೆ ಬೆಳಕಾಗುವುದರ ಜೊತೆಗೆ ಆಶ್ರಯದಾತರಾಗಿದ್ದಾರೆ. ಐವತ್ತಕ್ಕೂ ಹೆಚ್ಚು ಜನರು ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.
ಪುನೀತ್ ರಾಜಕುಮಾರ ಅವರ ಮೂರನೇ ಪುಣ್ಯಸ್ಮರಣೆ ದಿನದಂದು ಇತ್ತೀಚಿಗೆ ಜನಿಸಿದ ಮಗನಿಗೆ ಪುನೀತ್ ರಾಜಕುಮಾರ್ ಎಂದು ಹೆಸರಿಡುವ ಮೂಲಕ ದಂಪತಿಗಳು ತಮ್ಮ ಅಪ್ಪಟ ಅಭಿಮಾನ ವ್ಯಕ್ತಪಡಿಸಿದ್ದಾರೆ.
ನೂರಾರು ಅನಾಥ ಶವಗಳಿಗೆ ಅಂತ್ಯಕ್ರಿಯೆ ನಡೆಸಿರುವ ಇವರು ನೂರಾರು ಜನರನ್ನು ಅವರ ಕುಟುಂಬಗಳಿಗೆ ತಲುಪಿಸುವ ಕೆಲಸ ಮಾಡಿದ್ದಾರೆ.ಸಿದ್ದಾಪುರ: ತಾಲೂಕಿನ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬರು ಅವರಂತೆ ನಾವು ಈ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪುನೀತ್ ಅವರ ನಿಧನದ ನಂತರ ತಾವು ನಡೆಸುತ್ತಿರುವ ಅನಾಥಾಶ್ರಮಕ್ಕೆ ಪುನೀತ್ ರಾಜಕುಮಾರ್ ಹೆಸರಿಟ್ಟು ಎಷ್ಟೋ ಅನಾಥರಿಗೆ ಬದುಕು ಕಲ್ಪಿಸಿಕೊಟ್ಟಿದ್ದಾರೆ. ಅನಾಥರ ಸೇವೆ ನಡೆಸುತ್ತಿರುವ ನಾಗರಾಜ ನಾಯ್ಕ ದಂಪತಿಗಳು ಅನಾಥರ ಬಾಳಿಗೆ ಬೆಳಕಾಗುವುದರ ಜೊತೆಗೆ ಆಶ್ರಯದಾತರಾಗಿದ್ದಾರೆ. ಐವತ್ತಕ್ಕೂ ಹೆಚ್ಚು ಜನರು ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.
ಪುನೀತ್ ರಾಜಕುಮಾರ ಅವರ ಮೂರನೇ ಪುಣ್ಯಸ್ಮರಣೆ ದಿನದಂದು ಇತ್ತೀಚಿಗೆ ಜನಿಸಿದ ಮಗನಿಗೆ ಪುನೀತ್ ರಾಜಕುಮಾರ್ ಎಂದು ಹೆಸರಿಡುವ ಮೂಲಕ ದಂಪತಿಗಳು ತಮ್ಮ ಅಪ್ಪಟ ಅಭಿಮಾನ ವ್ಯಕ್ತಪಡಿಸಿದ್ದಾರೆ.
ನೂರಾರು ಅನಾಥ ಶವಗಳಿಗೆ ಅಂತ್ಯಕ್ರಿಯೆ ನಡೆಸಿರುವ ಇವರು ನೂರಾರು ಜನರನ್ನು ಅವರ ಕುಟುಂಬಗಳಿಗೆ ತಲುಪಿಸುವ ಕೆಲಸ ಮಾಡಿದ್ದಾರೆ.














Comments