ಅರಣ್ಯ ಇಲಾಖೆ ದಾಳಿ : ಅಕ್ರಮ ಚಿರತೆ ಚರ್ಮ ವಶ
- Ananthamurthy m Hegde
- Dec 8, 2024
- 1 min read

ಸಿದ್ದಾಪುರ: ದಾಂಡೇಲಿ ಅರಣ್ಯ ಸಂಚಾರಿ ದಳವು ಸಿದ್ದಾಪುರದ ಕ್ಯಾದಗಿ ಗ್ರಾಮದ ಅಳ್ಳಿಮಕ್ಕಿಯ ಮನೆಯೊಂದರ ಮೇಲೆ ದಾಳಿ ನಡೆಸಿದೆ . ದಾಳಿ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಚಿರತೆ ಚರ್ಮವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಾರಾಯಣ ನಾಯ್ಕ್ ಎನ್ನುವವರ ಮನೆಯಲ್ಲಿ ಚಿರತೆ ಚರ್ಮ ಸಂಗ್ರಹಿಸಿಟ್ಟಿದ್ದರು. ಪಿಎಸ್ಐ ಯಲ್ಲಪ್ಪ.ಎಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಬಹುಕಾಂತ್ ನಾಯಕ್, ಪ್ರಶಾಂತ್ ನಾಯಕ್, ಗುರುರಾಜ್ ಮಡಿವಾಳ, ಮಂಜುನಾಥ್ ಪಟಗಾರ, ಸತೀಶ್ ಗುಡೆ ಭಾಗವಹಿಸಿದ್ದರು .
Comentários