ಆಕಸ್ಮಿಕ ಬೆಂಕಿ : ಮನೆ ಭಸ್ಮ
- Ananthamurthy m Hegde
- Nov 6, 2024
- 1 min read
ಶಿರಸಿ: ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಮನೆಯೊಂದು ಸಂಪೂರ್ಣವಾಗಿ ಸುಟ್ಟು ಸುಮಾರು ೪ ಲಕ್ಷ ರೂ ಅಧಿಕ ಹಾನಿ ಸಂಭವಿಸಿದ ಘಟನೆ ಶಿರಸಿ ತಾಲೂಕಿನ ಗಿಡಮಾವಿನಕಟ್ಟೆಯಲ್ಲಿ ಮಧ್ಯರಾತ್ರಿ ಸಂಭವಿಸಿದೆ. ಮನೆ ಸೇರಿದಂತೆ ಮನೆಯೊಳಗಿದ್ದ ಬಂಗಾರದ ಒಡವೆ, ಹಣ, ಬಟ್ಟೆ, ದಿನಸಿ, ಅಗತ್ಯ ದಾಖಲೆಪತ್ರಗಳೆಲ್ಲಾ ಸುಟ್ಟು ಕರಕಲಾಗಿದೆ. ನಾಗವೇಣಿ ಮಹೇಶ ಉಪ್ಪಾರ ಇವರಿಗೆ ಸೇರಿದ ಮನೆ ಸುಟ್ಟು ಹೋಗಿದೆ. ಯಡಳ್ಳಿ ಗ್ರಾಪಂ ಅದ್ಯಕ್ಷ ಭಾಸ್ಕರ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Comments