ಗಾಂಜಾ ಮಾರಾಟ; ಶಿರಸಿಯಲ್ಲಿ ವಿಕ್ರಮ ಭಟ್, ಕಶ್ಯಪ ಹೆಗಡೆ ಬಂಧನ
- Ananthamurthy m Hegde
- Jul 5
- 1 min read

ಶಿರಸಿ: ಅಕ್ರಮವಾಗಿ ಗಾಂಜಾ ಮಾದಕ ವಸ್ತು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ಗ್ರಾಮೀಣ ಪೊಲೀಸರು ಇಂದು ಬೆಳಗಿನ ಜಾವ 3:00 ಗಂಟೆಗೆ ವಶಕ್ಕೆ ಪಡೆದುಕೊಂಡ ಘಟನೆ ಶಿರಸಿಯಲ್ಲಿ ನಡೆದಿದೆ.
ವಿಕ್ರಮ್ ರಾಮಕೃಷ್ಣ ಭಟ್ (28), ಕಶ್ಯಪ್ ಮಂಜುನಾಥ ಹೆಗಡೆ(27) ಬಂಧಿತ ಆರೋಪಿಗಳು.
ಗಿಡಮಾವಿನಕಟ್ಟೆ ಹತ್ತಿರ ಬರೂರ್ ಚೆಕ್ ಪೋಸ್ಟ್ ನಲ್ಲಿ ಸಿಲ್ವರ್ ಟೊಯೋಟಾ ಇನ್ನೋವಾ ಕಾರ್ ನಲ್ಲಿ ಅಕ್ರಮ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡಿಕೊಂಡು ಶಿರಸಿ ಕಡೆಗೆ ಮಾರಾಟ ಮಾಡಲು ಹೋಗುತ್ತಿರುವಾಗ ಸಿಕ್ಕಿ ಬಿದ್ದಿದ್ದು, ಸದರಿಯವರನ್ನು ವಶಕ್ಕೆ ಪಡೆದು ಅಂದಾಜು 4,500/- ರೂ ಮೌಲ್ಯದ 80 ಗ್ರಾಂ ಗಾಂಜಾ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಟೊಯೋಟಾ ಇನ್ನೋವಾ ಕಾರ್ ನ್ನು ಜಪ್ತಿಪಡಿಸಿಕೊಂಡಿದ್ದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿದೆ. ಹಿರಿಯ ಅಧಿಕಾರಿಗಳು ಹಾಗೂ ಡಿಎಸ್ಪಿ ಗೀತಾ ಪಾಟೀಲ್ ,ಶಿರಸಿ ಗ್ರಾಮೀಣ ನಿರೀಕ್ಷಕರಾದ ಮಂಜುನಾಥ್ ಗೌಡ ರವರ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ ಕುಮಾರ್ ಎಮ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
Comments