top of page

ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಕೃಷ್ಣಯಜುರ್ವೇದ ಘನ ಪಾರಾಯಣ ಸತ್ರ - 3

  • Writer: Ananthamurthy m Hegde
    Ananthamurthy m Hegde
  • Jul 3
  • 1 min read
ree

ಶಿರಸಿ: ತಾಲೂಕಿ‌ನ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡ ಒಂಬತ್ತು‌ ದಿನಗಳ ಮೂರನೇ ವರ್ಷದ ಕೃಷ್ಣಯಜುರ್ವೇದ ಘನ ಪಾರಾಯಣ ಸತ್ರ - 3 ಸ್ವರ್ಣವಲ್ಲೀ ಮಠದಲ್ಲಿ ಗುರುವಾರದಿಂದ ಆರಂಭಗೊಂಡಿದೆ.

ಸ್ವರ್ಣವಲ್ಲೀ ಮಹಾಸಂಸ್ಥಾನದ‌ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಮಹಾಸಂಕಲ್ಪವನ್ನು ಕೈಗೊಳ್ಳಲಾಯಿತು. ಶ್ರೀ ಮಠದ ಶಿಷ್ಯ ಭಕ್ತ ಜನರಿಗೆ ಸಕಲ ಕ್ಷೇಮವು, ಸಕಾಲದಲ್ಲಿ ಮಳೆ ಆಗಲಿ, ಧನ ಧಾನ್ಯಗಳು ಸಮೃದ್ಧಿಯಾಗಲಿ, ವಿವಿಧ ವಿಕೃತಿಗಳು ನಿವಾರಣೆಯಾಗಿ ಸಂಸ್ಕೃತಿಯ ಪುನರುತ್ಥಾನವಾಗಲಿ, ಲೋಕವು ಧರ್ಮ ಮಾರ್ಗದಲ್ಲಿ ಸಾಗುವಂತಾಗಲಿ ಎಂದು ಈ ಪಾರಾಯಣ ಸತ್ರ ಸಂಕಲ್ಪಿಸಲಾಯಿತು.

ನಾಡಿನ ಶ್ರೇಷ್ಠ ವಿದ್ವಾಂಸರ ಕೂಡುವಿಕೆಯಲ್ಲಿ ನವ ದಿನಗಳ ಕಾಲ ಪಾರಾಯಣ ನಡೆಯಲಿದೆ. ವೇದವಿದ್ವಾಂಸರಾದ ಕೊಯಂಬತ್ತೂರಿನ ಘನಪಾಠಿಗಳಾದ ವೇ. ಬ್ರ. ಆಹಿತಾಗ್ನಿ ಜಂಬೂನಾಥ, ಯಲ್ಲಾಪುರದ ವೇ. ಮೂ. ಗೋಪಾಲಕೃಷ್ಣ ಘನಪಾಠಿ, ತಮಿಳುನಾಡಿನ ವೇ.ಮೂ. ಭುವನಸುಂದರ ಘನಪಾಠಿ, ರಾಧಾಕೃಷ್ಣ ಘನಪಾಠಿ, ಮತ್ತೀಫಟ್ಟಾ, ಗೋಕರ್ಣದ ವೇ.ಮೂ. ನಾಗರಾಜ ಗಾಯತ್ರೀ ಘನಪಾಠಿ, ಶಿವಮೊಗ್ಗದ ವೇ. ಮೂ. ದತ್ತಾತ್ರೇಯ ಘನಪಾಠಿ, ಶೃಂಗೇರಿಯ ವೇ. ಮೂ. ರಾಮಚಂದ್ರ ಘನಪಾಠಿ, ವೇ. ಮೂ. ನಿರಂಜನ ಘನಪಾಠಿ ಬೆಣ್ಣೆಗದ್ದೆ, ಶಶಿಭೂಷ ಶರ್ಮಾ, ಶ್ರೀವತ್ಸ, ಶ್ರೀನಿವಾಸ ಇತರ ವಿದ್ವಾಂಸರು ಭಾವಹಿಸಿದ್ದಾರೆ.

ಪಾರಾಯಣ ವೇಳೆ ಆಸ್ತಿಕ ಭಕ್ತರು ಬಂದು ಕುಳಿತು ಶ್ರವಣ ಮಾತ್ರದಿಂದಲೇ ಅನೇಕ ಪಾಪಗಳು ನಾಶವಾಗುತ್ತವೆ. ಅಂತಹ ಅತೀ ವಿರಳವಾದ ಈ ಕಾರ್ಯಕ್ರಮದಲ್ಲಿ ಭಕ್ತ ಜನರು ಪಾಲ್ಗೊಂಡು ವೇದಪುರುಷನ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀಮಠದ ಪ್ರಕಟಣೆ ತಿಳಿಸಲಾಗಿದೆ.

Comments


Top Stories

bottom of page