top of page

ಇಂಡೋ-ಪಾಕ್ ಸಂಘರ್ಷ : ಬೆಂಗಳೂರಿನ ಮೇಲೂ ಎಫೆಕ್ಟ್‌‌!

  • Writer: Ananthamurthy m Hegde
    Ananthamurthy m Hegde
  • 4 days ago
  • 1 min read

ಬೆಂಗಳೂರು: ನರಿಬುದ್ದಿ ಪಾಕಿಸ್ತಾನಕ್ಕೆ ಭಾರತ ಪ್ರತ್ಯುತ್ತರ ನೀಡ್ತಿದ್ದು, ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ದದ ಎಫೆಕ್ಟ್ ಸಿಲಿಕಾನ್ ಸಿಟಿಗೂ ತಟ್ಟಿದೆ. ಉತ್ತರ ಭಾರತದತ್ತ ಹೋಗಲು ಜನ ಹಿಂದೇಟು ಹಾಕ್ತಿದ್ದು, ಟ್ರಾವೆಲ್ಸ್ ಏಜೆನ್ಸಿಗಳಿಗೆ ಭಾರೀ ಹೊಡೆತ ಬಿದ್ದಿದೆ.

ಉತ್ತರ ಭಾರತದ ಪ್ರವಾಸ ಸಂಪೂರ್ಣ ಸ್ತಬ್ಧ!

ಭಾರತ- ಪಾಕಿಸ್ತಾನದ ಮಧ್ಯೆ ನಡೆದ ಘರ್ಷಣೆ ಬೆನ್ನಲ್ಲೇ ಟೂರಿಸಂಗೆ ಬಿಸಿ ತಟ್ಟಿದೆ. ಯಾವಾಗ ಗಡಿಯಲ್ಲಿ ಮಿಸೈಲ್‌ಗಳು ಸದ್ದು ಮಾಡೋದಕ್ಕೆ ಶುರುವಾಯ್ತೋ ಉತ್ತರ ಭಾರತದ ಕಡೆ ಪ್ರಯಾಣ ಬೆಳೆಸುವುದು ಸಂಪೂರ್ಣ ಬಂದ್ ಆಗಿದೆ.

ಹೌದು, ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಬೆಂಗಳೂರಿನಿಂದ ಬೇರೆ ರಾಜ್ಯಗಳಿಗೆ ಜನ ಪ್ರವಾಸ ಮಾಡ್ತಾರೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಿಗೆ ಟ್ರಿಪ್‌ಗಳನ್ನ ಪ್ಲ್ಯಾನ್ ಮಾಡುತ್ತಿದ್ದರು. ಆದರೆ ಯುದ್ಧದ ಭೀತಿಯಿಂದಾಗಿ ಉತ್ತರ ಭಾರತದ ಪ್ರವಾಸಕ್ಕೆ ಜನ ಹಿಂದೇಟು ಹಾಕ್ತಿದ್ದಾರೆ. ಕೋಲ್ಕತಾ, ಪಂಜಾಬ್, ದೆಹಲಿ, ಮಧ್ಯಪ್ರದೇಶ, ಹರಿಯಾಣ, ನಾಗಲ್ಯಾಂಡ್, ರಾಜಸ್ಥಾನಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಈಗಾಗಲೇ ಬುಕ್ಕಿಂಗ್ ಮಾಡಿದವರು ಕ್ಯಾನ್ಸಲ್‌ ಮಾಡ್ತಿದ್ದು, ಟ್ರಾವೆಲ್ಸ್ ಏಜೆನ್ಸಿಗಳಿಗೆ ಶೇಕಡ 90ರಷ್ಟು ನಷ್ಟವಾಗಿದೆ.

ಪ್ರವಾಸಕ್ಕೆ ಹೋಗಲು ಜನ ಹಿಂದೇಟು:

ಉತ್ತರ ಭಾರತದ ಸುಮಾರು 29 ಏರ್ಪೋರ್ಟ್ ಗಳು ಬಂದ್ ಆಗಿದೆ. ಯುದ್ಧದ ಭೀತಿಯಿಂದ ಹೆಚ್ಚಿನ ಪ್ರವಾಸಿಗರು ಮನೆಯಿಂದ ಹೊರ ಹೋಗಲು ಇಷ್ಟ ಪಡುತ್ತಿಲ್ಲ ಎಂದು ಟ್ರಾವೆಲ್ ಏಜೆನ್ಸಿ ಮಾಲೀಕ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.

ಟ್ರಾವೆಲ್ಸ್ ಏಜೆನ್ಸಿಗಳಿಗೆ ಭಾರೀ ಹೊಡೆತ

ಉತ್ತರ ಭಾರತ ರಾಜ್ಯಗಳು ಮಾತ್ರವಲ್ಲ ಪಕ್ಕದ ರಾಜ್ಯಗಳಿಗೂ ಪ್ರವಾಸಕ್ಕೆ ಹೋಗ್ತಿಲ್ಲ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳ ಟ್ರಿಪ್‌‌ಗಳನ್ನೂ ಕ್ಯಾನ್ಸಲ್‌ ಮಾಡ್ತಿದ್ದಾರೆ.

ದೇಶ ಅಂತ ಬಂದಾಗ ನಾವು ಲಾಭ, ನಷ್ಟದ ಬಗ್ಗೆ ಮಾತನಾಡುವುದಿಲ್ಲ. ಉತ್ತರ ಭಾರತದ ಎಲ್ಲಾ ಟ್ರಿಪ್ ಗಳು ಕ್ಯಾನ್ಸಲ್ ಆಗಿದೆ. ಕಾರ್ಪೊರೇಟ್ ವಲಯ ಕೆಲವು ಚಟುವಟಿಕೆಗಳು, ಸಣ್ಣ ಪುಟ್ಟ ಮೀಟಿಂಗ್ ಗಳು ಮಾತ್ರ ನಡೆಯುತ್ತಿದೆ. ಶೇಕಡಾ 50ರಷ್ಟು ಬ್ಯುಸಿನೆಸ್ ಕಡಿಮೆಯಾಗಿದೆ. ಆದರೂ ನಾವು ದೇಶದ ಪರ ನಿಲ್ಲುತ್ತೇವೆ ಎಂದು ಟ್ರಾವೆಲ್ ಏಜೆನ್ಸಿ ಮಾಲೀಕ ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.

ಒಟ್ಟಾರೆ ಯುದ್ಧದ ಭೀತಿಯಲ್ಲಿದ್ದ ಜನ ಟ್ರಿಪ್‌ ಕ್ಯಾನ್ಸಲ್‌ ಮಾಡ್ತಿದ್ದು, ಸಿಲಿಕಾನ್ ಸಿಟಿಯ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿ‌ಗಳ ಮೇಲೆ ಪರಿಣಾಮ ಬೀರಿದೆ.

Comentários


Top Stories

bottom of page