ಉಚಿತ ಕಣ್ಣಿನ ಪೊರೆ ತಪಾಸಣೆ ಶಸ್ತ್ರ ಚಿಕಿತ್ಸೆ ಶಿಬಿರ ಯಶಸ್ವಿ
- Ananthamurthy m Hegde
- Dec 8, 2024
- 1 min read

ಯಲ್ಲಾಪುರ: ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ವಿಶ್ವ ಸೇವಾ ಸಮಿತಿ, ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ತಾಲೂಕ ಆಸ್ಪತ್ರೆ ಯಲ್ಲಾಪುರ, ಗ್ರೀನ್ ಕೇರ್ (ರಿ.) ಶಿರಸಿ, ಯುವ ರೆಡ್ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲ್ಲಾಪುರ ಮತ್ತು ಸಂಕಲ್ಪ ಟ್ರಸ್ಟ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯ ಶಿಬಿರ ಮತ್ತು "ವಿಶ್ವ ಪಾರ್ಶ್ವವಾಯು ದಿನ 2024" ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ರೋಟರಿ ಆಸ್ಪತ್ರೆಯ ನೇತೃ ತಜ್ಞ ಡಾ.ಎ.ಜಿ ವಸ್ತ್ರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಣ್ಣಿನ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಲ್ಲಾಪುರ ತಾಲೂಕಾ ಆರೋಗ್ಯ ಅಧಿಕಾರಿ ಡಾ. ನರೇಂದ್ರ ಪವರ್ ಮಾತನಾಡಿ ನೇತ್ರದಾನದ ಬಗ್ಗೆ ತಿಳಿಸಿ ಆದಷ್ಟು ಎಲ್ಲರೂ ನೇತ್ರದಾನವನ್ನು ಮಾಡಬೇಕಾಗಿ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಡಿ. ಜನಾರ್ಧನ್ ಮಾತನಾಡಿ ಇಂತಹ ಸಮಾಜ ಸೇವೆಯ ಕೆಲಸಗಳನ್ನು ಮಾಡುತ್ತಿರುವ ಎಲ್ಲಾ ಸಂಸ್ಥೆಗಳನ್ನು ಪ್ರಶಂಸಿಸಿದರು. ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞ ಡಾ.ಸೌಮ್ಯ ಕೆ. ವಿ. ಮಾತನಾಡಿ ಶಿಬಿರದ ಉಪಯೋಗ ಮತ್ತು ವಿಶ್ವ ಪಾರ್ಶ್ವವಾಯು ದಿನದ ಬಗ್ಗೆ ಮಾಹಿತಿ ನೀಡಿದರು.
ಗ್ರೀನ್ ಕೇರ್ ಶಿರಸಿ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್. ಎಂ. ಮಾತನಾಡಿ ಆರೋಗ್ಯ ಸಂಬಂಧಿ ಯಾವುದೇ ಶಿಬಿರಗಳಲ್ಲಿ ನಾವು ಕೈಜೋಡಿಸುವುದಾಗಿ ತಿಳಿಸಿದರು. ರೋಟರಿ ಆಸ್ಪತ್ರೆಯ ಕಾರ್ಯಕ್ರಮ ಅಧಿಕಾರಿ ಗಿರೀಶ್ ಧಾರೇಶ್ವರ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ನ ಸಂಚಾಲಕ ಶರತ್ ಕುಮಾರ್, ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜ, ಯಲ್ಲಾಪುರ ತಾಲೂಕು ಆಸ್ಪತ್ರೆಯ ನೇತ್ರಾಧಿಕಾರಿ ಪರ್ವೀನ್ ಬಾನು, ಜೆ.ಕೆ. ಎಂಟರ್ಪ್ರೈಸಸ್ ವ್ಯವಸ್ಥಾಪಕ ಮಹಾಂತೇಶ್ ಪ್ರಭು, ಗ್ರೀನ್ ಗೇರ್ ಸಂಸ್ಥೆಯ ಸಿಬ್ಬಂದಿ ಅಪ್ಸನಾ ಕೆ.ಎಚ್. ರೋಟರಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾಲೂಕಾ ಆಸ್ಪತ್ರೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ತಾಳಿಕೋಟೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ 144 ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿ 72 ಶಿಬಿರಾರ್ಥಿ ಗಳನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.












Comments