ಉದಯಪುರ ಐಷಾರಾಮಿ ರೆಸಾರ್ಟ್ ನಲ್ಲಿ ಪಿ.ವಿ ಸಿಂಧು ಮದುವೆ
- Ananthamurthy m Hegde
- Dec 22, 2024
- 1 min read

ಉದಯಪುರ: ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಭಾನುವಾರ ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ರೆಸಾರ್ಟ್ ರಾಫೆಲ್ಸ್‌ನಲ್ಲಿ ತನ್ನ ನಿಶ್ಚಿತ ವರ ವೆಂಕಟದತ್ತ ಸಾಯಿ ಅವರೊಂದಿಗೆ ವಿವಾಹವಾಗಲಿದ್ದಾರೆ.
ವೆಂಕಟದತ್ತ ಸಾಯಿ ಅವರು ಹೈದರಾಬಾದ್ ಮೂಲದ, ಪೊಸಿಡೆಕ್ಸ್ ಟೆಕ್ನಾಲಜೀಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ವಿವಾಹದ ನಂತರ, ಡಿಸೆಂಬರ್ 24 ರಂದು ಸಿಂಧು ಅವರ ತವರಾದ ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 20 ರಂದು ಸಂಗೀತ ಕಾರ್ಯಕ್ರಮ ಮತ್ತು ಮರುದಿನ ಹಳದಿ, ಪೆಲ್ಲಿಕೂತುರು ಮತ್ತು ಮೆಹೆಂದಿ ಶಾಸ್ತ್ರಗಳು ಅದ್ಧೂರಿಯಾಗಿ ನಡೆದಿವೆ.
ಇತ್ತೀಚೆಗೆ, ಲಖನೌದಲ್ಲಿ ನಡೆದ ಸೈಯದ್ ಮೋದಿ ಇಂಡಿಯಾ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್‌ನಲ್ಲಿ ಚೀನಾದ ವು ಲುವೊ ಯು ಅವರನ್ನು ಸೋಲಿಸುವ ಮೂಲಕ 29 ವರ್ಷದ ಸಿಂಧು ಎರಡು ವರ್ಷಗಳಿಂದ ತನ್ನ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ವರ್ಲ್ಡ್ ಟೂರ್ ನ್ನು ಕೊನೆಗೊಳಿಸಿದರು.
Comments