ಎಲ್.ಎಸ್.ಜಿ-ಕೆ.ಎಲ್ ರಾಹುಲ್ ನಂಟು ಅಂತ್ಯ: ಕೆ.ಎಲ್ ವಿರುದ್ಧ ಗೋಯೆಂಕಾ ಅಸಮಾಧಾನ
- Ananthamurthy m Hegde
- Nov 1, 2024
- 1 min read

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ೨೦೨೫ರ ಆವೃತ್ತಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಐವರನ್ನು ಉಳಿಸಿಕೊಂಡಿದೆ. ಆದರೆ ನಾಯಕ ಕೆಎಲ್ ರಾಹುಲ್ ಅವರನ್ನು ಕಿತ್ತೊಗೆದಿದೆ. ಇದರೊಂದಿಗೆ ಎಲ್‌ಎಸ್‌ಜಿ-ಕೆಎಲ್ ರಾಹುಲ್ ನಡುವಿನ ೩ ವರ್ಷಗಳ ಸುದೀರ್ಘ ಸಂಬAಧ ಕೊನೆಗೊಂಡಿದೆ.
ರಿಟೆನ್ಶನ್ ಮುಗಿದ ಬಳಿಕ ಕೆಎಲ್ ರಾಹುಲ್ ವಿರುದ್ಧ ಮಾಲೀಕ ಸಂಜೀವ್ ಗೋಯೆಂಕಾ ವಾಗ್ದಾಳಿ ನಡೆಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಪ್ರಸಾರವಾದ ವಿಡಿಯೋ ಸಂದೇಶದಲ್ಲಿ ಗೋಯೆಂಕಾ ಅವರು ಪೂರನ್, ಬಿಷ್ಣೋಯ್, ಬದೋನಿ, ಮೊಹ್ಸಿನ್, ಮಯಾಂಕ್ ಉಳಿಸಿಕೊಳ್ಳಲು ಹಿಂದಿರುವ ತಾರ್ಕಿಕತೆಯನ್ನು ವಿವರಿಸಿದ್ದಾರೆ. ತಮ್ಮ ಹಿತಾಸಕ್ತಿಗಾಗಿ ಅಲ್ಲ, ತಮ್ಮ ವೈಯಕ್ತಿಕ ಗುರಿಗಳು, ವೈಯಕ್ತಿಕ ಆಕಾಂಕ್ಷೆಗಳಿಗಿAತ ತಂಡಕ್ಕೆ ಮೊದಲ ಸ್ಥಾನ ನೀಡುವ ಆಟಗಾರನನ್ನು ರಿಟೇನ್ ಮಾಡಿಕೊಳ್ಳುವುದು ಸರಳ ಮನಸ್ಥಿತಿಯಾಗಿತ್ತು ಎಂದು ಹೇಳಿದ್ದಾರೆ.
೧೭ನೇ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಮುಗಿದ ನಂತರ ಗೋಯೆಂಕಾ, ರಾಹುಲ್ ಅವರನ್ನು ತರಾಟೆ ತೆಗೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ೧೦ ವಿಕೆಟ್‌ಗಳ ಸೋಲನುಭವಿಸಿದ ಕೆಲವೇ ನಿಮಿಷಗಳಲ್ಲಿ ಘಟನೆ ನಡೆದಿತ್ತು. ಮಾಲೀಕ, ನಾಯಕನೊಂದಿಗೆ ವಾಗ್ವಾದ ನಡೆಸುತ್ತಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಅಂದಿನಿAದ ಈವರೆಗೂ ರಾಹುಲ್, ಲಕ್ನೋ ತಂಡ ತೊರೆಯುತ್ತಾರೆ ಎಂದು ಹೇಳಲಾಗಿತ್ತು. ಆ ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಎಲ್ಲಾ ಬೆಳವಣಿಗೆಗಳ ನಡೆದ ಕಾರಣ ಅವರೇ ತಂಡವನ್ನು ತೊರೆಯಲು ನಿರ್ಧರಿಸಿದ್ದರು.















Comments