top of page

ಎಲ್ಲೆಲ್ಲಿ ಹೇಗಿರಲಿದೆ ಹವಾಮಾನ ?

  • Writer: Ananthamurthy m Hegde
    Ananthamurthy m Hegde
  • Feb 24
  • 1 min read

ಬೆಂಗಳೂರು: ರಾಜ್ಯದಾದ್ಯಂತ ಸೂರ್ಯನ ಶಾಖ ಹೆಚ್ಚಾಗಿದ್ದು, ಉರಿ ಸೆಕೆಗೆ ಜನ ಬಳಲಿ ಬೆಂಡಾಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಸಿ ವಾತಾವರಣದಿಂದ ಎಚ್ಚರಿಕೆಯಿಂದ ಇರುವಂತೆ ಉತ್ತರ ಕನ್ನಡ ಜಿಲ್ಲೆಗೆ ಅಲರ್ಟ್ ನೀಡಲಾಗಿದೆ.

ಎಲ್ಲೆಲ್ಲಿ ಅಲರ್ಟ್?

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಹಲವು ತಾಲೂಕುಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗಿದ್ದು, ಬಿಸಿ ವಾತಾವರಣ ಹಾಗೂ ತೇವಾಂಶದ (ಹ್ಯುಮಿಡಿಟಿ) ವಾತಾವರಣ ಇರಲಿದೆ. ಮುಂದಿನ 3 ದಿನದ ವರೆಗೆ ಈ ಅಲರ್ಟ್ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ree

ಗರಿಷ್ಠ ಬಿಸಿಲು ಎಲ್ಲಿ?

ಕಳೆದ 24 ಗಂಟೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು ಉಷ್ಣಾಂಶ ಅದರೆ 36.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ಉಷ್ಣಾಂಶ ದಾವಣಗೆರೆಯಲ್ಲಿ 15 ಡಿ.ಸೆ ದಾಖಲಾಗಿದೆ.

ಮಳೆ ಮುನ್ಸೂಚನೆ?

ಕಳೆದ ಶನಿವಾರ ಹಾಗೂ ಭಾನುವಾರ ಮೈಸೂರು, ಉತ್ತರ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಆದರೆ ಮುಂದಿನ 5 ದಿನ ಮಳೆ ಮುನ್ಸೂಚನೆ ಇಲ್ಲ. ಒಣ ಹವೆ ಅಲರ್ಟ್ ನೀಡಲಾಗಿದೆ.

ಎಲ್ಲೆಲ್ಲಿ ಎಷ್ಟು ತಾಪಮಾನ?.

ಗರಿಷ್ಠ ತಾಪಮಾನವು ಕರಾವಳಿಯಲ್ಲಿ 34-36 ° C ವ್ಯಾಪ್ತಿಯಲ್ಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ ಮತ್ತು ಹಾವೇರಿಯಲ್ಲಿ 32-34 ° C ಮತ್ತು ವಿಜಯಪುರ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು ಮತ್ತು ಬಾಗಲಕೋಟೆಯಲ್ಲಿ 31-37 ° C, ದಕ್ಷಿಣ ಒಳನಾಡಿನ ಚಿಕ್ಕಮಣಿ, ಚಿಕ್ಕಮಗಳೂರು, ಚಿಂತಾಮಣಿ, ಬೆಂಗಳೂರು, ಮೈಸೂರು ಮತ್ತು ಮಡಿಕೇರಿಯಲ್ಲಿ 31- 33 ° ಸೆ. ಹಾಗೂ ದಕ್ಷಿಣ ಒಳನಾಡಿನ ಆಗುಂಬೆ, ಚಿತ್ರದುರ್ಗ, ಚಾಮರಾಜನಗರ, ದಾವಣಗೆರೆ, ಮಂಡ್ಯ ಮತ್ತು ಶಿವಮೊಗ್ಗದಲ್ಲಿ 34-35 ° C ಇತ್ತು.

• ಕಳೆದ 24 ಗಂಟೆಗಳಲ್ಲಿ, ದಕ್ಷಿಣ ಒಳನಾಡಿನ ಆಗುಂಬೆಯಲ್ಲಿ ಗರಿಷ್ಠ ತಾಪಮಾನದಲ್ಲಿ (+2.9°C) ಗಮನಾರ್ಹ ಏರಿಕೆಯಾಗಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ. ಗರಿಷ್ಠ ತಾಪಮಾನವು ಕರಾವಳಿಯ ಕಾರವಾರದಲ್ಲಿ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ, ಉತ್ತರ ಒಳನಾಡಿನ ಬಾಗಲಕೋಟೆಯಲ್ಲಿ ಮತ್ತು ದಕ್ಷಿಣ ಒಳನಾಡಿನ ಮಂಡ್ಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ರಾಜ್ಯದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯವಾಗಿತ್ತು.

Comments


Top Stories

bottom of page