ಏಕಾಏಕಿ ಸ್ಫೋಟಗೊಂಡ ಮೊಬೈಲ್
- Ananthamurthy m Hegde
- Dec 27, 2024
- 1 min read

ಯಲ್ಲಾಪುರ: ಏಕಾಏಕಿ ಮೊಬೈಲ್ ಸ್ಫೋಟಗೊಂಡ ಘಟನೆ ತಾಲೂಕಿನ ಹುಬ್ನಳ್ಳಿಯಲ್ಲಿ ನಡೆದಿದೆ. ಹುಬ್ನಳ್ಳಿಯ ನಾಗೇಂದ್ರ ಭಟ್ಟ ಅವರ ಮನೆಯಲ್ಲಿ ಸ್ಯಾಮಸಂಗ್ ಮೊಬೈಲ್ ಸ್ಫೋಟಗೊಂಡಿದೆ. ನಾಗೇಂದ್ರ ಭಟ್ಟ ಅವರು ಆರು ವರ್ಷದ ಹಿಂದೆ ಸ್ಯಾಮಸಂಗ್ ಕಂಪನಿಯ ಮೊಬೈಲ್ ಖರೀದಿಸಿದ್ದರು. ಈವರೆಗೆ ಮೊಬೈಲಿನಲ್ಲಿ ಯಾವುದೇ ಸಮಸ್ಯೆ ಬಂದಿರಲಿಲ್ಲ.
ಗುರುವಾರ ಬೆಳಗ್ಗೆ ಫೋನ್ ಮಾಡಲು ತೆರಳುತ್ತಿದ್ದ ವೇಳೆ ಮೊಬೈಲ್ ಸ್ಫೋಟವಾಗಿದೆ. ಏಕಾಏಕಿ ಸ್ಫೋಟದ ಶಬ್ದ ಕೇಳಿದ್ದರಿಂದ ಎಲ್ಲರೂ ಬೆಚ್ಚಿ ಬಿದ್ದು ಮನೆಯಿಂದ ಹೊರಗೆ ಬಂದರು. ಮೊಬೈಲ್ ಸ್ಪರ್ಶಿಸುವ ಮೊದಲೇ ಮೊಬೈಲ್ ಸ್ಫೋಟವಾಗಿದ್ದರಿಂದ ಯಾರಿಗೂ ಗಾಯವಾಗಿಲ್ಲ.
ಮೊಬೈಲಿನಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಒಮ್ಮೆಲೇ ಆರಿಸಲು ಸಾಧ್ಯವಾಗಲಿಲ್ಲ. ಮೊಬೈಲ್ ಬ್ಯಾಟರಿ ಹೊತ್ತಿ ಉರಿದಿದ್ದು, ಬೆಂಕಿ ಹೊತ್ತಿ ಉರಿಯುತ್ತಿದ್ದ ಮೊಬೈಲನ್ನು ಮನೆಯಿಂದ ಆಚೆ ಹಾಕಿ, ನಂತರ ಬೆಂಕಿ ಆರಿಸಿದರು.
ಮೊಬೈಲ್ ಸ್ಪೋಟವಾಗುವ ವೇಳೆ ಗುಡುಗು-ಸಿಡಿಲು ಇರಲಿಲ್ಲ. ಮೊಬೈಲ್ ಚಾರ್ಚಿಗೆ ಸಹ ಹಾಕಿಕೊಂಡಿರಲಿಲ್ಲ. ಮೊಬೈಲ್ ಬಳಿ ವಿದ್ಯುತ್ ಸಂಪರ್ಕವೂ ಇರಲಿಲ್ಲ. ಬೆಂಕಿಯೂ ಹತ್ತಿರ ಇರಲಿಲ್ಲ.
Comments