ಐಎಂಡಿಬಿ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಟಾಕ್ಸಿಕ್, ಕಾಂತಾರ -೧ ಚಿತ್ರಗಳು !
- Ananthamurthy m Hegde
- Jan 18
- 1 min read
ರಾಕಿಂಗ್ ಸ್ಟಾರ್ ಯಶ್ ಮೊನ್ನೆ ಮೊನ್ನೆ ಬರ್ತ್ಡೇ ಮಾಡಿಕೊಂಡು ತನ್ನ ಅಭಿಮಾನಿ ಬಳಗಕ್ಕೆ ಟಾಕ್ಸಿಕ್ ಟ್ರೀಟ್ ಕೊಟ್ಟಿದ್ರು. ಟಾಕ್ಸಿಕ್ ನ ಈ ಹಾಟೆಸ್ಟ್ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿತ್ತು. ಸೂಪರ್ ಸ್ಟಾರ್ಗಳ ಎಲ್ಲಾ ದಾಖಲೆಗಳನ್ನ ಪುಡಿಗಟ್ಟಿ, 56 ಮಿಲಿಯನ್ ವೀಕ್ಷಣೆ ಕಂಡು ಟಾಕ್ಸಿಕ್ ಟೀಸರ್ ಹೊಸ ದಾಖಲೆಯ ಪುಟ ಸೇರಿದೆ. ಇದೇ ಟೈಮ್ನಲ್ಲಿ ಯಶ್ ತನ್ನ ಟಾಕ್ಸಿಕ್ನ ಮತ್ತೊಂದು ದಾಖಲೆಯ ಅಧ್ಯಾಯ ಓಪನ್ ಮಾಡಿದ್ದಾರೆ
ಆ ಕಡೆ ಯಶ್ ಟಾಕ್ಸಿಕ್ ಟೀಸರ್ ಸೂಪರ್ ಹಿಟ್ ಆದ ಸಂಭ್ರಮದಲ್ಲಿದ್ರೆ ಈಗ ಕಡೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಕಾಂತಾರ ಚಾಪ್ಟರ್ ಒನ್ ಶೂಟಿಂಗ್ ಮಾಡ್ತಾ, ತೆಲುಗಿನಲ್ಲಿ ಜೈ ಹನುಮಾನ್ ಹಾಗು ಹಿಂದಿಯಲ್ಲಿ ಚತ್ರಪತಿ ಶಿವಾಜಿ ಸಿನಿಮಾಗಳಲ್ಲಿ ಅನೌನ್ಸ್ ಮಾಡಿ ಪ್ಯಾನ್ ಇಂಡಿಯಾ ತುಂಬೆಲ್ಲಾ ಚಿಲ್ ಮಾಡುತ್ತಿದ್ದಾರೆ. ಇದೀಗ ಇಡೀ ಯಶ್ ಅಭಿಮಾನಿ ಬಳಗ ಹಾಗು ರಿಷಬ್ ಫ್ಯಾನ್ಸ್ ಸಂಭ್ರಮಿಸೋ ಮತ್ತೊಂದು ಸರ್ಪ್ರೈಸ್ ರಿವಿಲ್ ಆಗಿದೆ.

ಟಾಕ್ಸಿಕ್.. ಯಶ್ ಈ ಭಾರಿ ಪ್ಯಾನ್ ವರ್ಲ್ಡ್ನಲ್ಲಿ ಸೌಂಡ್ ಮಾಡೋ ಸಿನಿಮಾ. ಕಾಂತಾರ ಚಾಪ್ಟರ್ 1 ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡೋದಕ್ಕೆ ಸಿದ್ಧಪಡಿಸುತ್ತಿರೋ ಮೂವಿ. ಈ ಎರಡೂ ಸಿನಿಮಾಗಳ ಮೇಲೆ ಇಡೀ ದೇಶದ ಸಿನಿ ಪ್ರೇಕ್ಷಕ ಕಣ್ಣಿಟ್ಟು ಕೂತಿದ್ದಾರೆ. ಇದೀಗ ಐಎಂಡಿಬಿ 2025ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನ ರಿವೀಲ್ ಮಾಡಿದೆ. ಐಎಂಡಿಬಿ ಕೊಟ್ಟಿರೋ ಲೀಸ್ಟ್ನಲ್ಲಿ ಟಾಕ್ಸಿಕ್ ಹಾಗು ಕಾಂತಾರ ಚಾಪ್ಟರ್ ಒನ್ ಸಿನಿಮಾಗಳು ಸ್ಥಾನ ಪಡೆದಿದೆ.
ಅಂದ್ಹಾಗೆ ಐಎಂಡಿಬಿ ರಿಲೀಸ್ ಮಾಡಿರುವ 2025ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಸಲ್ಮಾನ್ ಖಾನ್ ನಟಿಸಿದ 'ಸಿಕಂದರ್' ಸಿನಿಮಾ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಹೀಗಾಗಿ ಈ ಪಟ್ಟಿಯಲ್ಲಿ ಸಿಕಂದರ್ ಸಿನಿಮಾ ಮೊದಲ ಸ್ಥಾನ ಪಡೆದಿದೆ. ರಾಕಿಂಗ್ ಸ್ಟಾರ್ ನಟನೆಯ ಟಾಕ್ಸಿಕ್ ಸಿನಿಮಾ ಎರಡನೇ ಸ್ಥಾನ ಪಡೆದುಕೊಂಡಿದೆ.
ರಾಕಿಂಗ್ ಸ್ಟಾರ್ ಯಶ್ ದಾಖಲೆ ಬರೆಯೋದು ಅಭ್ಯಾಸ ಆಗಿದೆ. ಟಾಕ್ಸಿಕ್ ಟೀಸರ್ ಕೊಟ್ಟ ಟ್ರೀಟ್, ಹಾಗು ಈಗ ಐಎಂಡಿಬಿಯಲ್ಲಿ ಟಾಕ್ಸಿಕ್ ಎರಡನೇ ಸ್ಥಾನ ಪಡೆದಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಆ ಕಡೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಏನು ಕಡಿಮೆ ಇಲ್ಲ. ರಿಷಬ್ ಕೂಡ ಐಎಂಡಿಬಿ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ರಿಷಬ್ ನಿರ್ದೇಶಿಸಿ ನಟಿಸುತ್ತಿರೋ ಕಾಂತಾರ ಚಾಪ್ಟರ್1 ಸಿನಿಮಾ 2025ರ ಬಹು ನಿರೀಕ್ಷಿತ ಪಟ್ಟಿಯಲ್ಲಿ 19ನೇ ಸ್ಥಾನ ಪಡೆದಿದೆ.
ನಟ ಯಶ್ ಹಾಗು ರಿಷಬ್ ಶೆಟ್ಟಿ ಸಧ್ಯ ಕನ್ನಡ ಚಿತ್ರರಂಗದ ಒಂದೇ ನಾಣ್ಯದ ಎರಡು ಮುಖದಂತೆ ಕಾಣುತ್ತಿದ್ದಾರೆ. ಯಾಕಂದ್ರೆ ಇಬ್ಬರದ್ದು ಒಂದೇ ದಾರಿ ಒಂದೇ ಗುರಿ. ಆದ್ರೂ ಚಿತ್ರರಂಗ ಅಂದ ಮೇಲೆ ಒಂದು ಫೈಪೋಟಿ ಇರುತ್ತಲ್ಲವಾ..? ಐಎಂಡಿಬಿ ಕೊಟ್ಟಿರೋ ಈ ರೇಟಿಂಗ್ನಿಂದ ಈಗ ಇಬ್ಬರ ಮಧ್ಯೆ ಹೆಲ್ದಿಯಾಗಿರೋ ಚಿಕ್ಕದೊಂದು ಪೈಪೋಟಿ ಏರ್ಪಟ್ಟಿರೋದಂದು ನಿಜ.
Comments