ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸೂರ್ಯಕುಮಾರ್ ಯಾದವ್
- Ananthamurthy m Hegde
- Nov 19, 2024
- 1 min read

ದಕ್ಷಿಣಕನ್ನಡ: ಟೀಮ್ ಇಂಡಿಯಾದ ಟಿ೨೦ ನಾಯಕ ಸೂರ್ಯಕುಮಾರ್ ಯಾದವ್ ಪತ್ನಿಯ ಸಮೇತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿ ಗೆಲುವಿನ ಬಳಿಕ ಪತ್ನಿ ದೇವಿಶಾರೊಂದಿಗೆ ಆಗಮಿಸಿ ಆಶ್ಲೇಷ ಬಲಿ ಪೂಜೆ, ಮಹಾಪೂಜೆ ಹಾಗೂ ಅಭಿಷೇಕ ನೆರವೇರಿಸಿದ್ದಾರೆ. ದೇವಾಲಯದ ವತಿಯಿಂದ ದಂಪತಿಯನ್ನು ಗೌರವಿಸಲಾಯಿತು.
ಈ ಹಿಂದೆ ಭಾರತ ಟಿ೨೦ ವಿಶ್ವಕಪ್ ಗೆದ್ದ ಸಮಯದಲ್ಲಿ ಪತ್ನಿ ದೇವಿಶಾ ಶೆಟ್ಟಿ ಜತೆ ಉಡುಪಿಯಲ್ಲಿರುವ ಕಾಪುವಿನ ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಯನ್ನು ೩-೧ ಅಂತರದಿAದ ಗೆದ್ದ ಭಾರತ ತಂಡವು ನಾಯಕ ಸೂರ್ಯಕುಮಾರ್ ನೇತೃತ್ವದಲ್ಲಿ ಹಲವು ದಾಖಲೆಗಳನ್ನು ಛಿದ್ರ ಮಾಡಿತ್ತು. ಇದು ಭಾರತಕ್ಕೆ ಒಟ್ಟಾರೆ ಮೂರನೇ ಸರಣಿ ಗೆಲುವಾಗಿದೆ.















Comments