top of page

ಕಾಂಗ್ರೆಸ್ ಸರಕಾರ ರಾಜ್ಯವನ್ನು ಮುಸ್ಲಿಂರಿಗೆ ಗಿರವಿ ಇಡುತ್ತಿದೆ

  • Writer: Ananthamurthy m Hegde
    Ananthamurthy m Hegde
  • Nov 4, 2024
  • 1 min read



ಕಾಂಗ್ರೆಸ್ ಮುಸ್ಲಿಮರ ಓಲೈಕೆಗಾಗಿ ಹಸಿರೀಕರಣ ಮಾಡಲು ಹೊರಟಿದೆ. ಹಸಿರು ಸಮೃದ್ಧ, ರೈತರ ಸಂಕೇತ. ಆದರೆ ಕಾಂಗ್ರೆಸ್ ಸರಕಾರ ಓಲೈಕೆ ರಾಜಕಾರಣದಲ್ಲಿ ದೇಶವನ್ನು ಮಾರಲು ಹೊರಟಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ ಹೇಳಿದರು.


ಅವರು ಸೋಮವಾರ ನಗರದ ತಹಶೀಲ್ದಾರ ಕಛೇರಿಯಲ್ಲಿ ವಕ್ಫ್ ಬೋರ್ಡ್ ನಿಂದ ರೈತರ ಭೂಮಿ ಕಬಳಿಕೆ ವಿರೋಧಿಸಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.


ಜೀವಜಲ ಕಾರ್ಯಪಡೆ ಶಿರಸಿ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ನಾವು ಹಿಂದು ಸ್ಥಾನದಲ್ಲಿದ್ದೇವೆ ಎಂದು ಹೆಸರಿಗಷ್ಟೇ ಹೇಳುವ ಪರಿಸ್ಥಿತಿ ಬಂದಿದೆ. ನಮ್ಮವರಿಗೆ ಏನಾದರೂ ಸಮಸ್ಯೆ ಆದಲ್ಲಿ ನಾವೆಷ್ಟು ಜನ ಸೇರುತ್ತೇವೆ, ಇತರರು ಎಷ್ಟು ಜನ ಸೇರುತ್ತಾರೆ ಎಂಬುದನ್ನು ನೋಡಬೇಕು. ಎಲ್ಲ ಹಿಂದುಗಳು ಒಟ್ಟಾಗಿ ಸಮಾಜದ ಎದುರಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.


ಜಿಲ್ಲಾ ಭಾಜಪಾ ವಕ್ತಾರ ಸದಾನಂದ ಭಟ್ಟ ಮಾತನಾಡಿ, ಮುಸ್ಲಿಂ ಜನಪ್ರತಿನಿಧಿಗಳೇ ತಿಂದು ನೀರು ಕುಡಿದಿದ್ದಾರೆ. ಒಬ್ಬ ಸಾಮಾನ್ಯ ರೈತರ ಕಾಗದಪತ್ರ ಮಾಡಿಕೊಡಲು ಸರಕಾರ ಇಲಾಖೆಗಳು ತಿಂಗಳುಗಟ್ಟಲೇ ಸಮಯ ತೆಗದುಕೊಳ್ಳುತ್ತದೆ. ಆದರೆ ರಾತ್ರಿ ಬೆಳಗಾಗುವುದರೊಳಗೆ ಸರಕಾರ ರೈತರ ಜಮೀನನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿದೆ. ಸಿವಿಲ್ ನ್ಯಾಯಾಲಯಗಳಿಗೆ ತೀರ್ಮಾನದ ಅಧಿಕಾರವನ್ನು ನೀಡಬೇಕು ಎಂದು ಅವರು ಹೇಳಿದರು.


ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ರಾಜ್ಯವನ್ನು ಮುಸ್ಲಿಮರಿಗೆ ಗಿರವಿ ಇಡುವ ಕೆಲಸ ಮಾಡುತ್ತಿವೆ. ಹಿಂದುಗಳಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುವ ಮೂಲಕ ಕಾಂಗ್ರೆಸ್ ನಾಯಕರು ಧಮ್ ತೋರಲಿ ಎಂದರು.


ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ಗುರುಪ್ರಸಾದ ಹರ್ತೆಬೈಲ್, ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿದರು. ನಂತರದಲ್ಲಿ ರೈತರ ಜಮೀನನ್ನು ತಮ್ಮ ಹೆಸರಿಗೆ ಮಾಡುತ್ತಿರುವ ವಕ್ಪ್ ಬೋರ್ಡ್ ನಡೆಯನ್ನು, ರಾಜ್ಯ ಕಾಂಗ್ರೆಸ್ ಸರಕಾರದ ನೀತಿಯನ್ನು ವಿರೋಧಿಸಿ ಮನವಿ ಸಲ್ಲಿಸಿದರು.


ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ರಮೇಶ ನಾಯ್ಕ ಕುಪ್ಪಳ್ಳಿ, ಆರ್.ಡಿ. ಹೆಗಡೆ ಜಾನ್ಮನೆ, ಅನಂತಮೂರ್ತಿ ಹೆಗಡೆ, ನಂದನ ಸಾಗರ, ಮಹಾಂತೇಶ ಹಾದಿಮನಿ, ನಾಗರಾಜ ನಾಯ್ಕ, ಆರ್.ವಿ. ಹೆಗಡೆ, ಸಚಿನ್ ಅಚ್ನಳ್ಳಿ, ರವಿಚಂದ್ರ ಶೆಟ್ಟಿ, ವಿಎಚ್ಪಿ ಕೇಶವ ಮರಾಠೆ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Comments


Top Stories

bottom of page