top of page

ಕಿಚ್ಚ 47ನೇ ಸಿನಿಮಾ ಅನೌನ್ಸ್!

  • Writer: Ananthamurthy m Hegde
    Ananthamurthy m Hegde
  • Jul 5
  • 1 min read
ree

ಸ್ಯಾಂಡಲ್​ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಬಿಗ್​ಬಾಸ್ 12 ನಿರೂಪಣೆ ಮಾಡುತ್ತಾರೆ ಎಂದು ಗುಡ್​ನ್ಯೂಸ್ ಕೊಟ್ಟ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಎಕ್ಸೈಟಿಂಗ್ ಸುದ್ದಿ ತಂದಿದ್ದಾರೆ. ಬಿಲ್ಲ ರಂಗ ಬಾಷ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ಸಜ್ಜಾದ ಕಿಚ್ಚ ಸುದೀಪ್ ಅವರು ಮುಂದಿನ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ 47 ನೇ ಸಿನಿಮಾ ಅನೌನ್ಸ್ ಮಾಡಲಾಗಿದೆ. ಮ್ಯಾಕ್ಸ್ ನಂತರ ಮತ್ತೆ ವಿಜಯ್ ಕಾರ್ತಿಕೇಯ ಜೊತೆ ಕಿಚ್ಚ ಸಿನಿಮಾ ಮಾಡಲಿದ್ದಾರೆ.

 ನಿರ್ದೇಶಕ ಚೇರನ್ ಸಿನಿಮಾ ಬದಲು ವಿಜಯ್ ಜೊತೆ ಮತ್ತೊಂದು ಸಿನಿಮಾಗೆ ಕಿಚ್ಚ ಸಜ್ಜಾಗಿದ್ದಾರೆ. ಮ್ಯಾಕ್ಸ್ ಸಕ್ಸಸ್ ಬೆನ್ನಲ್ಲೆ ಮ್ಯಾಕ್ಸ್ 2 ಅನೌನ್ಸ್ ಮಾಡ್ತಾರ ಕಿಚ್ಚ ಎನ್ನುವ ಸಂದೇಹ ಎಲ್ಲರಲ್ಲೂ ಇತ್ತು.

ಖಾಸಗಿಹೋಟೆಲ್ ನಲ್ಲಿ ಸುದೀಪ್ ಅಭಿನಯದ 47ನೇ ಸಿನಿಮಾ ಸುದ್ದಿಗೋಷ್ಠಿ ನಡೆದಿದೆ. ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ 47 ನೇ ಸಿನಿಮಾ ರಿವೀಲ್ ಮಾಡಲಾಗಿದೆ. ಜುಲೈ 7 ರಿಂದ ಸಿನಿಮಾ ಶೂಟಿಂಗ್ ಪ್ಲಾನ್ ಮಾಡಿರುವ ಚಿತ್ರತಂಡ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಪಕ್ಕಾ ಮಾಸ್ ಸಿನಿಮಾಗೆ ಸಜ್ಜಾದ ಮ್ಯಾಕ್ಸ್ ಜೋಡಿ ಔಟ್ ಅಂಡ್ ಔಟ್ ಮಾಸ್ ಟೀಸರ್ ಲಾಂಚ್ ಮಾಡಿದ್ದಾರೆ. ಸುದೀಪ್ 47ನೇ ಚಿತ್ರವನ್ನು ತಮಿಳಿನ ಬಿಗ್ ಪ್ರೊಡಕ್ಷನ್ ಹೌಸ್ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ವಿಷ್ಣುವರ್ಧನ್ ಜೊತೆ ಸತ್ಯಜ್ಯೋತಿ ಚಿತ್ರ ನಿರ್ಮಾಣ ಮಾಡಿದ್ದ ಸತ್ಯಜ್ಯೋತಿ ಫಿಲಂಸ್, ಈಗ 39 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರನಿರ್ಮಾಣಕ್ಕೆ ಕೈ ಹಾಕಿದೆ.

ಮ್ಯಾಕ್ಸ್ ನಂತ್ರ‌ ನಾವು ಮತ್ತೆ ಒಂದಾಗಿದ್ದೇವೆ. ಇದು ಮ್ಯಾಕ್ಸ್ 2 ಅಲ್ಲ ಇದು ಬೇರೆ ಸಿನಿಮಾ. ಸದ್ಯಕ್ಕೆ ಮ್ಯಾಕ್ಸ್ 2 ಸಿನಿಮಾ ಕೈ ಬಿಟ್ಟಿದ್ದೀವಿ. ಈ‌ ವರ್ಷ ಎರಡು ಸಿನಿಮಾ ಮಾಡುತ್ತೇವೆ. ಬಿಲ್ಲರಂಗ ಬಾಷ ಸಿನಿಮಾ ಈ ವರ್ಷ ರಿಲೀಸ್ ಆಗಲ್ಲ. ಆದರೆ ಈ ಸಿನಿಮಾ ಇದೇ ವರ್ಷ ಡಿಸೆಂಬರ್ 25 ಕ್ಕೆ ರಿಲೀಸ್ ಮಾಡುತ್ತೇವೆ. ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಶುರು ಆಗುತ್ತೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


Comments


Top Stories

bottom of page