top of page

ಮೈಸಾ ಲುಕ್​, ಹಿಂದೆಂದೂ ಕಾಣದ ಅವತಾದಲ್ಲಿ ರಶ್ಮಿಕಾ

Writer: Ananthamurthy m Hegde
Ananthamurthy m Hegde
Jun 27, 2025
1 min read

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮಹಿಳಾ ಪ್ರಧಾನ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆನೇ ಮಹಿಳಾ ಪ್ರಧಾನ ಚಿತ್ರ ತೆಗೆದುಕೊಂಡು ಹೋಗಲು ರೆಡಿ ಆಗಿದ್ದಾರೆ. ಐದು ಭಾಷೆಯಲ್ಲಿ ಬರ್ತಿರೋ ಈ ಚಿತ್ರಕ್ಕೆ ಒಂದು ವಿಶೇಷ ಹೆಸರು ಇಟ್ಟಿದ್ದಾರೆ. ಈ ಮೂಲಕ ಕೊಡಗಿನ ಕುವರಿ ಮೈಸಾ ಅಂತಲೇ ಅಬ್ಬರಿಸುತ್ತಿದ್ದಾರೆ. ವಾರಿಯರ್ ಲುಕ್ ಅಲ್ಲಿಯೇ ರಶ್ಮಿಕಾ ಮಂದಣ್ಣ ಹೊಳೆಯುತ್ತಿದ್ದಾರೆ.

ಮೈಸಾ ಫಸ್ಟ್ ಲುಕ್ ಔಟ್

ಮೈಸಾ ಹೆಸರಿನ ಚಿತ್ರದಲ್ಲಿ ವೀರರಾಣಿಯಂತನೇ ರೊಚ್ಚಿಗೆದ್ದಿದ್ದಾರೆ. ದುಷ್ಟರನ್ನ ಹೊಡೆದು ಹಾಕುತ್ತಿರೋ ಲುಕ್ ಅಲ್ಲಿಯೇ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಕಣ್ಣಲ್ಲಿ ಆಕ್ರೋಶ ಇದೆ. ಮುಖದ ಮೇಲೆ ರಕ್ತದ ಕಲೆಗಳೂ ಇವೆ. ಕೈಯಲ್ಲಿ ಹಿಡಿದ ಆಯುಧಕ್ಕೂ ರಕ್ತ ಅಂಟಿಕೊಂಡಿರುವ ಪೋಸ್ಟಾರ್ ಬಿಗ್ಯಾಕ್ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗ್ತಾ ಇದೆ. ಈ ಸಿನಿಮಾ ಕೂಡ ರಶ್ಮಿಕಾ ಮಂದಣ್ಣನಿಗೆ ಗೆಲುವು ತರಲಿ ಅಂತ ಅಭಿಮಾನಿಗಳು ಹಾರೈಸಿದ್ದಾರೆ.


Comments


Top Stories

1/322
bottom of page