ರಾಮಾಯಣ ಫಸ್ಟ್ ಲುಕ್ ಬಿಡುಗಡೆ
- Ananthamurthy m Hegde
- Jul 3
- 1 min read

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ನಟ ರಣಬೀರ್ ಕಪೂರ್ ನಟನೆಯ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ರಾಮಾಯಣ' ಸಿನಿಮಾದ ಫಸ್ಟ್ ಲುಕ್ ಗುರುವಾರ ಬಿಡುಗಡೆಯಾಗಿದೆ.
ಚಿತ್ರದ ಫಸ್ಟ್ ಗ್ಲಿಂಫ್ಸ್ ಪ್ಸ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯಶ್, 'ಹತ್ತು ವರ್ಷಗಳ ಕನಸು... ಜಗತ್ತಿನ ಶ್ರೇಷ್ಠ ಮಹಾಕಾವ್ಯವನ್ನು ತೆರೆ ಮೇಲೆ ತರಬೇಕೆಂಬ ಧೃಡಸಂಕಲ್ಪದೊಂದಿಗೆ 'ರಾಮಾಯಣ' ಸಿನಿಮಾವನ್ನು ಅತ್ಯಂತ ಗೌರವಾದಾರಗಳಿಂದ ಪ್ರಸ್ತುತಪಡಿಸಲಾಗಿದೆ. ಇದಕ್ಕಾಗಿ ವಿಶ್ವದ ಪ್ರತಿಭಾವಂತ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದೇವೆ. ರಾಮ ವರ್ಸಸ್ ರಾವಣನ ಅಮರ ಕಥೆಯನ್ನು ಸಂಭ್ರಮಿಸೋಣ' ಎಂದು ಬರೆದುಕೊಂಡಿದ್ದಾರೆ
Comments