ಕೋಟೆಕೆರೆಯಲ್ಲಿ ತೇಲುತ್ತಿರುವ ಶವ ಪತ್ತೆ
- Ananthamurthy m Hegde
- Nov 10, 2024
- 1 min read

ಶಿರಸಿ: ಕೋಟೆಕೆರೆಯಲ್ಲಿ ಮಹಿಳೆಯ ಶವ ತೇಲುತ್ತಿರುವ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ ಯುವತಿಯನ್ನು ಕಸ್ತೂನಗರದ ನೇಹಾ ಬಾನು (22) ಎಂದು ಗುರುತಿಸಲಾಗಿದೆ. ಮೂಲತಃ ಅನವಟ್ಟಿಯವಳಾಗಿದ್ದ ನೇಹಾ ನಗರದ ಕಸ್ತೂರಬಾ ನಗರದಲ್ಲಿರುವ ತನ್ನ ಅಜ್ಜನ ಮನೆಗೆ ಬಂದಿದ್ದಳು. ಇಂದು ಬೆಳಿಗ್ಗೆ ತಿಂಡಿ ತಿಂದು ಮನೆ ಬಿಟ್ಟವಳು ಕೆರೆಗೆ ಹಾರಿ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ. ಸಿ.ಪಿ.ಆಯ್ ಸೀತಾರಾಮ ಸ್ಥಳಕ್ಕೆ ಆಗಮಿಸಿ ಪರಿಶೀಲನೆ. ನಡೆಸಿದ್ದಾರೆ. ಶವವನ್ನು ಕೆರೆಯಿಂದ ಎತ್ತಿ ಶವಗಾರಕ್ಕೆ ಕಳುಹಿಸಲಾಗಿದೆ.















Comments