ಕಾಡಾನೆಗಳ ದಾಳಿ: ತೋಟಗಳು ಛಿದ್ರ
- Ananthamurthy m Hegde
- Nov 5, 2024
- 1 min read
ಸಿದ್ದಾಪುರ: ತಾಲೂಕಿನ ಶೇಲೂರಿನಲ್ಲಿ ಐದು ಕಾಡಾನೆಗಳು ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿದೆ. ಆನೆಗಳ ಆಟಾಟೋಪಕ್ಕೆ ನಾಶಗೊಂಡಿದ್ದು ತೆನೆ ಬಿಟ್ಟ ಭತ್ತದ ಗದ್ದೆಗಳು ನಾಶವಾಗಿದೆ. ಕಳೆದ ೨-೩ ದಿನಗಳಿಂದ ಆ ಭಾಗದ ಕೋಡಗದ್ದೆ, ಕಲಗದ್ದೆ ಊರುಗಳಲ್ಲಿ ಕಾಣಿಸಿಕೊಂಡಿದ್ದ ಆನೆಗಳು ಸೋಮವಾರ ರಾತ್ರಿ ಶೇಲೂರಿನಲ್ಲಿ ಹಾವಳಿ ಎಬ್ಬಿಸಿದೆ. ಆನೆಗಳನ್ನು ಓಡಿಸಲು ಅರಣ್ಯ ಇಲಾಖೆ ಹರಸಾಹಸ ಪಟ್ಟಿದ್ದು ಕಾನುಸೂರು ಫಾರೆಸ್ಟರ್ ವಿ.ಟಿ ನಾಯಕ್ ನೇತೃತ್ವದಲ್ಲಿ ಕಾರ್ಯಾಚಣೆ ನಡೆದಿದೆ.














Comments