top of page

ಕಾಣೆಯಾದ ಮಾರಿಕಾಂಬೆ ಅಮ್ಮನವರ ಮರದ ಗೊಂಬೆ

  • Writer: Ananthamurthy m Hegde
    Ananthamurthy m Hegde
  • Dec 26, 2024
  • 1 min read
ree

ಕಾರವಾರ ಶ್ರೀ ಮಾರಿಕಾಂಬೆ ಅಮ್ಮನರ ಹೊರ ತೆಗೆಯುವ ವೇಳೆಯಿದ್ದ ದೇವಿಯ ಮರದ ಗೊಂಬೆ ನಾಪತ್ತೆಯಾದ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಳ್ಳಿ ಮುರಿನಕಟ್ಟೆಯಲ್ಲಿ ಬುಧವಾರ ನಡೆದಿದೆ.

ಕೆಲವು ದಿನಗಳ ಹಿಂದೆ ಆಸರಕೇರಿಯ ಜನರು ವನದುರ್ಗಿ ದೇವಸ್ಥಾನದ ಬಳಿಯಿದ್ದ ಅಮ್ಮನ ಹೊರೆ ಸಾಗಿಸಿದ್ರು. ಅಲ್ಲದೇ, ಶಂಸುದ್ದೀನ್ ಸರ್ಕಲ್ ಬಳಿಯಿದ್ದ 2 ಅಮ್ಮನವರ ಗೊಂಬೆಯನ್ನು ಮುರಿನಕಟ್ಟೆಗೆ ಸಾಗಿಸಿ, ಪೂಜೆ ಸಲ್ಲಿಸಿ ಬಂದಿದ್ರು. ಆದರೆ, ಕಾರ್ಗದ್ದೆ, ಹುರುಳಿಸಾಲ, ಕಡವಿನಕಟ್ಟೆ ಹಾಗೂ ರಂಗಿನಕಟ್ಟೆಯ ಗ್ರಾಮಸ್ಥರು ಪರಿಶೀಲಿಸಿದಾಗ ಬೊಂಬೆ ನಾಪತ್ತೆಯಾಗಿದ್ದು ತಿಳಿದು ಬಂದಿದೆ. ಮುರಿನಕಟ್ಟೆಯಲ್ಲಿದ್ದ ಅಮ್ಮನವರ ಹೊರೆಯನ್ನು ವೆಂಕಟಾಪುರ ಗಡಿ ಭಾಗಕ್ಕೆ ಸಾಗಿಸಲು ಬಂದಾಗ ದೇವಿಯ ಮರದ ಗೊಂಬೆ ಕಾಣಿಯಾಗಿರೋದು ಬೆಳಕಿಗೆ ಬಂದಿದೆ. ವಿಷಯ ಎಲ್ಲೆಡೆ ಹರಡಿ ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿದ್ದರಿಂದ ಕೆಲ ಕಾಲ ಆತಂಕ ಸೃಷ್ಠಿಯಾಗಿತ್ತು. 

ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲವು ಹೊತ್ತು ಸ್ಥಳೀಯರಿಗೂ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳೀಯ ಹಿಂದೂ ಮುಖಂಡ ಗೋವಿಂದ ನಾಯ್ಕರಿಗೆ ಜಿಲ್ಲಾ ಎಸ್ಪಿ ಎಂ.ನಾರಾಯಣ್ ಕರೆ ಮಾಡಿ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಬಳಿಕ ಅಮ್ಮನರ ಹೊರೆಯನ್ನು ವಾಹನದಲ್ಲಿ ತುಂಬಿ ವೆಂಕಟಾಪುರ ಗಡಿಭಾಗಕ್ಕೆ ಸ್ಥಳೀಯರು ತಲುಪಿಸಿದ್ದಾರೆ. 

Comments


Top Stories

bottom of page