top of page

ಕೊನೆಗೂ ಮೌನ ಮುರಿದ ಚಹಲ್ ಪತ್ನಿ

  • Writer: Ananthamurthy m Hegde
    Ananthamurthy m Hegde
  • Jan 9
  • 1 min read

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ವಿಚ್ಛೇದನದ ವದಂತಿಗಳ ನಡುವೆ ಬುಧವಾರ ರಾತ್ರಿ ಮೌನ ಮುರಿದಿದ್ದಾರೆ. ಚಹಾಲ್ ಮತ್ತು ಧನಶ್ರೀ ವಿಚ್ಛೇದನ ನೀಡುತ್ತಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.

ಯೂಟ್ಯೂಬರ್, ನೃತ್ಯ ಸಂಯೋಜಕಿ ಮತ್ತು ದಂತವೈದ್ಯೆಯಾಗಿರುವ ಧನಶ್ರೀ ಅವರೊಂದಿಗೆ ಚಾಹಲ್ ಅವರು 2020 ಆಗಸ್ಟ್ 8ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ 2020ರ ಡಿಸೆಂಬರ್ 22ರಂದು ಗುರ್ಗಾಂವ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ವರದಿಗಳ ಪ್ರಕಾರ, ಚಾಹಲ್ ಅವರು ಧನಶ್ರೀ ಅವರೊಂದಿಗಿನ ಎಲ್ಲ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಿರುವುದು ಮತ್ತು ಧನಶ್ರೀ ಅವರು ತಮ್ಮ ಹೆಸರಿನ ಮುಂದಿದ್ದ ಚಾಹಲ್ ಎನ್ನುವುದನ್ನು ತೆಗೆದುಹಾಕಿದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಮುಂದುವರಿದು ದಂಪತಿ ಡಿವೋರ್ಸ್ ಪಡೆದಿದ್ದಾರೆ ಎನ್ನುವ ವದಂತಿಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ದಟ್ಟವಾಗಿ ಹರಡಿದ್ದವು. ಹೀಗಿದ್ದರೂ, ಧನಶ್ರೀ ಅವರು ಚಾಹಲ್ ಅವರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಗೆಯೇ ಉಳಿಸಿಕೊಂಡಿದ್ದು, ಇದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ.

'ಕಳೆದ ಕೆಲವು ದಿನಗಳು ನನ್ನ ಕುಟುಂಬ ಮತ್ತು ನನಗೆ ತುಂಬಾ ಕಠಿಣವಾಗಿ ಪರಿಣಮಿಸಿವೆ. ನಿರಾಧಾರ ಬರವಣಿಗೆ, ಸತ್ಯವನ್ನು ಪರಿಶೀಲಿಸದಿರುವುದು ಮತ್ತು ದ್ವೇಷವನ್ನು ಹರಡುವ ಟ್ರೋಲ್‌ಗಳಿಂದ ನನ್ನ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ' ಎಂದು ಧನಶ್ರೀ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Comments


Top Stories

bottom of page