ಕುಮಟಾ ತಾಲೂಕ ಆಡಳಿತ ಸೌಧದಲ್ಲಿ ಬಗಾರ ಹುಕುಂ ಸಮಿತಿ ಸಭೆ
- Ananthamurthy m Hegde
- Jun 14
- 1 min read
ಕುಮಟಾ ತಾಲೂಕ ಆಡಳಿತ ಸೌಧ ದ ತಹಶೀಲ್ದಾರ್ ಕಚೇರಿ ಮೀಟಿಂಗ್ ಹಾಲ್ ನಲ್ಲಿ ಶಾಸಕ ದಿನಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಬಗಾರ ಹುಕುಂ ಸಮಿತಿ ಸಭೆಯಲ್ಲಿ ಫಲಾನುಭವಿಗಳಿಗೆ ಭೂ ಹಂಚಿಕೆ ಕುರಿತು ಚರ್ಚಿಸಿ ನಿರ್ಣಯಿಸಲಾಯಿತು ಫಲಾನುಭವಿಗಳಿಗೆ ಬೂ ಮಂಜೂರಿ ಕುರಿತು ಮಾಹಿತಿ ನೀಡಲಾಯಿತು ಅರ್ಜಿ ಸಲ್ಲಿಸಿದ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ದ ಬಳಿಕ ಬಗಾರ್ ಹುಕುಂ ಸಮಿತಿಯಲ್ಲಿ ಒಟ್ಟು 8 ಅರ್ಜಿಗಳಿಗೆ ಮಂಜೂರಿ ನೀಡಲಾಯಿತು ಬಸ್ತಿ ಕೇರಿಯ ನಾಸಿರ್ ಇಲಿಯಾಸ್ ಕಾಜಿ ಸಾಕಿನ್ ಬಸ್ತಿಕೇರಿ 20 ಗುಂಟೆ, ದಿವಳ್ಳಿಯ ಗಣಪತಿ ಲಿಂಗಪ್ಪನಾಯ್ಕ್ ಒಂದು ಎಕರೆ ಯಾಣದ ಪರಮೇಶ್ವರ್ ಗೌಡ 3 ಎಕರೆ 12 ಗುಂಟೆ ಯಾಣದ ಹರೀಶ್ ಮರಾಠಿ ಒಂದು ಎಕರೆ 23 ಗುಂಟೆ ಮಳವಳ್ಳಿಯ ಕುಸುಮಾಕರ್ ಗೌಡ ಎರಡು ಎಕರೆ ಒಂಬತ್ತು ಗುಂಟೆ 8 ಆಣೆ ಅಳವಳ್ಳಿಯ ನಾರಾಯಣ ಗೌಡ 15 ಗುಂಟೆ, ಮಳವಳ್ಳಿಯ ಶೇಖರ್ ಗೌಡ ಒಂದು ಎಕ್ಕರೆ 25 ಗುಂಟೆ, ಮಳವಳ್ಳಿಯ ಗೋಪಾಲ್ ಗೌಡ ಒಂದು ಎಕರೆ 15ಗುಂಟೆ ಜಾಗವನ್ನು ಮಂಜೂರಿ ನೀಡಲಾಯಿತು ಸಭೆಯಲ್ಲಿ ತಹಶೀಲ್ದಾರ್ ಶ್ರೀ ಕೃಷ್ಣ ಕಾಮ್ಕರ್ ಹುಕುಂ ಸಮಿತಿ ಸದಸ್ಯರಾದ ಕುಮಾರ್ ಭಟ್ ಶ್ರೀಧರ್ ಕಲಗದ್ದೆ ಇನ್ನಿತರರು ಇದ್ದರು.
Comments