ಕುಮಟಾದ ಸಹಾಯ ಆಯುಕ್ತೆ ಕಲ್ಯಾಣಿ ಕಂಬಳೆಗೆ ಬೀಳ್ಕೊಡುಗೆ
- Ananthamurthy m Hegde
- Aug 8
- 1 min read

ಕುಮಟಾ: ತಾಲೂಕ ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕಳೆದ 2 ವರ್ಷಗಳಿಂದ ಕುಮಟಾ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಕಲ್ಯಾಣಿ ವೆಂಕಟೇಶ್ ಕಾಂಬಳೆ ಅವರು ವರ್ಗಾವಣೆಗೊಂಡಿರುವ
ಅವರ ಬೀಳ್ಕೊಡುಗೆ ಸಮಾರಂಭವನ್ನು ಇಂದು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕುಮಟಾ ಸಹಾಯಕ ಆಯುಕ್ತರ ಕಾರ್ಯಾಲದಿಂದ, ಅಂಕೋಲಾ ತಹಶೀಲ್ದಾರರು, ಕುಮಟಾ ಕಾರ್ಮಿಕ ಸಂಘ, ತಾಲೂಕಾ ಆಸ್ಪತ್ರೆ ಹಾಗೂ ವಿವಿಧ ಇಲಾಖೆಗಳಿಂದ ಕಲ್ಯಾಣಿ ಕಾಂಬ್ಳೆ ಅವರಿಗೆ ಹಾರ ಹಾಕಿ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಕಲ್ಯಾಣಿ ಕಾಂಬ್ಳೆ ನನಗೆ ಈ ಇಲಾಖೆಯಲ್ಲಿ ಇರುವ ಎಲ್ಲಾ ನೌಕರರು ತುಂಬಾ ಸಹಕಾರ ನೀಡಿದ್ದಾರೆ. ಅಂಕೋಲಾ ವಿಮಾನ ನಿಲ್ದಾಣದ ಕಾಮಗಾರಿ, ರಾಜ್ಯ ಹೆದ್ದಾರಿ ಕಾಮಗಾರಿ, ರಾಷ್ಟಿçÃಯ ಹೆದ್ದಾರಿ ಕಾಮಗಾರಿಯ ಹಲವಾರು ಸಮಸ್ಯೆಗಳನ್ನು ಪರಿಹಾರ ಮಾಡಲಾಗಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದ ಸಮಸ್ಯೆಗಳನ್ನೂ ಸಹ ಪರಿಹಾರ ಮಡಲಾಗಿದೆ ಎಂದರು.
ಬೈಟ್...
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರರಾದ ಅಶೋಕ ಭಟ್, ನೂತನ ಸಹಾಯಕ ಆಯುಕ್ತರಾದ ಪಿ. ಶ್ರವಣ್ ಕುಮಾರ್, ಪ್ರಮುಖರಾದ ಆರ್.ಎಚ್. ನಾಯ್ಕ ಕಾಗಾಲ್ ಅಂಕೋಲಾ ತಹಶೀಲ್ದಾರರಾದ ಚಿಕ್ಕಪ್ಪ ನಾಯಕ್, ಗ್ರೇಡ್ 2 ತಹಶೀಲ್ದಾರರಾದ ಸತೀಶ ಗೌಡ, ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ್, ಕಾರ್ಮಿಕ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಸೇರಿದಂತೆ ತಹಶೀಲ್ದಾರರ ಕಾರ್ಯಲಯದ ಅಧಿಕಾರಿಗಳು, ಸಹಾಯಕ ಆಯುಕ್ತರ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
Comments